ಭಾರತ್ ಜೋಡೊ ನ್ಯಾಯ ಯಾತ್ರೆ : ಬಜರಂಗ್ ಬಲಿಯ ಮುಖವಾಡ ಧರಿಸಿ ಗಧೆ ಹಿಡಿದ ರಾಹುಲ್ ಗಾಂಧಿ – vishwanews24
ಭಾರತ್ ಜೋಡೊ ನ್ಯಾಯ ಯಾತ್ರೆ : ಬಜರಂಗ್ ಬಲಿಯ ಮುಖವಾಡ ಧರಿಸಿ ಗಧೆ ಹಿಡಿದ ರಾಹುಲ್ ಗಾಂಧಿ
ದಿಸ್ಪುರ: ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಜರಂಗ್ ಬಲಿಯ ಮುಖವಾಡ ಧರಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ ಕೈಯಲ್ಲಿ ಗಧೆ ಹಿಡಿದು ಕೆಲವು ಕಲಾವಿದರೊಂದಿಗೆ ಪೋಸು ನೀಡಿದ್ದಾರೆ.
ಮಜುಲಿಯ ಶ್ರೀ ಔನಿಯಾತಿ ಸತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಜನರ ಕೋರಿಕೆಯ ಮೇರೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಬಜರಂಗ ಬಲಿ’ಯ ಮುಖವಾಡ ಧರಿಸಿ ಕೈಯಲ್ಲಿ ಗದೆ ಹಿಡಿದರು. ಅದೇ ರೀತಿಯ ‘ಬಜರಂಗ ಬಲಿ’ ಮುಖವಾಡಗಳನ್ನು ಧರಿಸಿದ ಕೆಲವು ಜನರೊಂದಿಗೆ ಕಾಂಗ್ರೆಸ್ ಸಂಸದ ಪೋಸ್ ನೀಡುತ್ತಿರುವ ಚಿತ್ರಗಳನ್ನು ಅಸ್ಸಾಂ ಕಾಂಗ್ರೆಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
Jai Bajrangbali! May His blessings be always on our beloved motherland.. @RahulGandhi Ji promoting the traditional art of mask making, celebrating neo-vaishnavite culture of Majuli, celebrating #UnityInDiversity#BharatJodoNyayYatra pic.twitter.com/GJCYCVTNbh
— Assam Congress (@INCAssam) January 19, 2024
“ಜೈ ಬಜರಂಗಬಲಿ! ಅವರ ಆಶೀರ್ವಾದ ನಮ್ಮ ಪ್ರೀತಿಯ ಮಾತೃಭೂಮಿಯ ಮೇಲೆ ಸದಾ ಇರಲಿ. ರಾಹುಲ್ ಗಾಂಧಿ ಜೀ ಅವರು ಮುಖವಾಡ ತಯಾರಿಕೆಯ ಸಾಂಪ್ರದಾಯಿಕ ಕಲೆಯನ್ನು ಉತ್ತೇಜಿಸುತ್ತಿದ್ದಾರೆ, ಮಜುಲಿಯ ನವ-ವೈಷ್ಣವ ಸಂಸ್ಕೃತಿಯನ್ನು ಆಚರಿಸುತ್ತಾರೆ, ಏಕತೆಯಲ್ಲಿ ವೈವಿಧ್ಯತೆಯನ್ನು ಸಂಭ್ರಮಿಸುತ್ತಿದ್ದಾರೆ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಬೆಳ್ತಂಗಡಿ: ಕರ್ತವ್ಯದ ವೇಳೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ – ಪ್ರಕರಣ ದಾಖಲು — vishwanews24
