ಭೂತಾನ್‌ಗೆ ಉಡುಗೊರೆಯಾಗಿ ಭಾರತದಿಂದ ಕೋವಿಡ್-19 ಲಸಿಕೆ ರವಾನೆ -Vishwanews24

Featured, ರಾಷ್ಟ್ರ ನ್ಯೂಸ್

ಭೂತಾನ್‌ಗೆ ಉಡುಗೊರೆಯಾಗಿ ಭಾರತದಿಂದ ಕೋವಿಡ್-19 ಲಸಿಕೆ ರವಾನೆ -Vishwanews24

ಮುಂಬೈ: ನೆರೆಯ ಭೂತಾನ್ ರಾಷ್ಟ್ರಕ್ಕೆ ಉಡುಗೊರೆಯಾಗಿ ಭಾರತ ಕೋವಿಡ್-19 ಲಸಿಕೆಯನ್ನು ರವಾನಿಸಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ಮುಂಜಾನೆ 1.5 ಲಕ್ಷ ಕೋವಿಡ್-19 ಲಸಿಕೆಯ ‘ಕೋವಿಶೀಲ್ಡ್‌’ ಡೋಸೇಜ್‌ಗಳನ್ನು ರವಾನಿಸಲಾಯಿತು.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋವಿಶೀಲ್ಡ್ ಲಸಿಕೆಯ 1.5 ಲಕ್ಷ ಡೋಸೇಜ್‌ಗಳನ್ನು ಬುಧವಾರ ಭೂತಾನ್‌ಗೆ ರವಾನಿಸಲಾಗಿದ್ದು ಕೊರೊನಾ ಲಸಿಕೆಯನ್ನು ಉಡುಗೊರೆಯಾಗಿ ಪಡೆದ ಮೊದಲ ರಾಷ್ಟ್ರ ಎಂಬ ಗೌರವಕ್ಕೆ ಭೂತಾನ್ ಪಾತ್ರವಾಗಿದೆ.

ಭಾರತ ಹಾಗೂ ಭೂತಾನ್‌ ಅನ್ಯೋನ್ಯ ಬಾಂಧವ್ಯವನ್ನು ಹೊಂದಿದ್ದು, ಕೊರೊನಾ ಸಂದರ್ಭದಲ್ಲೂ ಅಗತ್ಯ ವಸ್ತುಗಳ ಪೂರೈಕೆ ಮಾಡಿದೆ. ಕೊರೊನಾ ಸಂದರ್ಭದಲ್ಲೂ ಭಾರತದಿಂದ ಭೂತಾನ್‌ಗೆ 2.8 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಪಿಪಿಇ ಕಿಟ್, ಎನ್‌95 ಮಾಸ್ಕ್ ಸೇರಿದಂತೆ ಅಗತ್ಯ ಔಷಧಿ ಹಾಗೂ ವೈದ್ಯಕೀಯ ಸಾಮಾಗ್ರಿಗಳನ್ನು ಭಾರತದಿಂದ ಸಾಗಾಟ ಮಾಡಲಾಗಿದೆ. ಹಾಗೆಯೇ ಇಲ್ಲಿದ್ದ ೨ ಸಾವಿರ ಭೂತಾನ್‌ ಪ್ರಜೆಗಳನ್ನು ಕೂಡಾ ಸುರಕ್ಷಿತವಾಗಿ ಸರ್ಕಾರ ಕಳುಹಿಸಿಕೊಟ್ಟಿದೆ.

ಕೋವಿಡ್-19 ಲಸಿಕೆ ಉಡುಗೊರೆಯಾಗಿ ಪಡೆದ ಮೊದಲ ರಾಷ್ಟ್ರವೆಂಬ ಗೌರವಕ್ಕೆ ಭೂತಾನ್ ಪಾತ್ರವಾಗಿದೆ. ಭೂತಾನ್ ಜೊತೆಗೆ ಅನ್ಯೋನ್ಯ ಬಾಂಧವ್ಯ ಕಾಪಾಡಿರುವ ಭಾರತ, ಕೋವಿಡ್-19 ನಿರ್ಬಂಧಗಳ ಹೊರತಾಗಿಯೂ ನಿರಂತರ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಬದ್ಧತೆಯನ್ನು ಪ್ರದರ್ಶಿಸಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ. ಈ ಮೊದಲು ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೂತಾನ್ ಪ್ರಧಾನಿ ಲೊಟೆ ಶೆರಿಂಗ್ ಅಭಿನಂದಿಸಿದ್ದರು.

http://ಮಂಗಳೂರು: ಗೋರಕ್ಷಕ ಕಾರ್ಯಕರ್ತರ ಮೇಲೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು: ಪ್ರಭು ಚೌವ್ಹಾಣ್ -Vishwanews24