ಫೆ. 26ರಿಂದ ಮಾಚ್೯ 2ರವರೆಗೆ ದೇಯಿ ಬೈದ್ಯೆತಿ – ಕೋಟಿ ಚೆನ್ನಯರ ಪುಣ್ಯ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ ಮತ್ತು ಜಾತ್ರಾ ಮಹೋತ್ಸವ -Vishwanews24
ಫೆ. 26ರಿಂದ ಮಾಚ್೯ 2ರವರೆಗೆ ದೇಯಿ ಬೈದ್ಯೆತಿ – ಕೋಟಿ ಚೆನ್ನಯರ ಪುಣ್ಯ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ ಮತ್ತು ಜಾತ್ರಾ ಮಹೋತ್ಸವ -Vishwanews24
ಪುತ್ತೂರು: ಪುನುರುತ್ಹಾನಗೊಂಡು ಕಳೆದ ವರ್ಷ ಜರುಗಿದ ಬ್ರಹ್ಮ ಕಲಶೋತ್ಸವದ ಸಂದರ್ಭ ಹೊಸ ಇತಿಹಾಸ ನಿರ್ಮಾಣಕ್ಕೆ ಕಾರಣವಾಗಿದ್ದ ದೇಯಿ ಬೈದ್ಯೆತಿ – ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್’ನಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ ಮತ್ತು ಜಾತ್ರಾ ಮಹೋತ್ಸವ ಫೆ. 26ರಿಂದ ಮಾಚ್೯ 2ರವರೆಗೆ ನಡೆಯಲಿದೆ.
ವೈದಿಕ ಮತ್ತು ತೌಳವ ವಿಧಿ ವಿಧಾನಗಳ ಮೂಲಕ ನಡೆಯಲಿರುವ ಈ ಜಾತ್ರಾ ಮಹೋತ್ಸವದ ಕಾರ್ಯಗಳು ಸುಲಲಿತವಾಗಿ ನೆರವೇರಲು ಸಮಿತಿ ರಚಿಸಲಾಗಿದ್ದು, ಪರ್ಪುಂಜ ರಾಮ್ ಜಾಲ್ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೂರೇಲು ಸಂಜೀವ ಪೂಜಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ ಅವರ ಮಾರ್ಗದರ್ಶನ ಮತ್ತು ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್ ಅವರ ಅಧ್ಯಕ್ಷತೆಯಲ್ಲಿ ಗೆಜ್ಜೆಗಿರಿಯಲ್ಲಿ ನಡೆದ ಸಭೆಯಲ್ಲಿ ಸಮಿತಿ ರಚಿಸಲಾಗಿದ್ದು, ಜಾತ್ರೋತ್ಸವ ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಯಿತು.
5 ದಿನಗಳ ಉತ್ಸವ ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿದ್ದು, ಆದಿ ದೈವ ಧೂಮಾವತಿ, ಕುಪ್ಪೆ ಪಂಜುರ್ಲಿ, ಕಲ್ಲಾಲ್ದಾಯ, ಕೊರತಿ ನೇಮೋತ್ಸವ, ಮೂಲಸ್ಥಾನ ಗರಡಿ ನೇಮೋತ್ಸವ, ದೇಯಿ ಬೈದ್ಯೆತಿ ನೇಮೋತ್ಸವ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.
ಭೂತಾನ್ಗೆ ಉಡುಗೊರೆಯಾಗಿ ಭಾರತದಿಂದ ಕೋವಿಡ್-19 ಲಸಿಕೆ ರವಾನೆ -Vishwanews24
