ಮಂಗಳೂರು : ಅತ್ತಾವರ ಅಪಾರ್ಟ್ಮೆಂಟ್ ಪ್ಲ್ಯಾಟ್ ನಲ್ಲಿ ಆಕಸ್ಮಿಕ ಬೆಂಕಿ ; ಮಹಿಳೆ ಬಲಿ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಅತ್ತಾವರ ಅಪಾರ್ಟ್ಮೆಂಟ್ ಪ್ಲ್ಯಾಟ್ ನಲ್ಲಿ ಆಕಸ್ಮಿಕ ಬೆಂಕಿ ; ಮಹಿಳೆ ಬಲಿ

ಮಂಗಳೂರು  : ಅತ್ತಾವರ ಸಮೀಪದ ಅಪಾರ್ಟ್ ಮೆಂಟ್ ನ ಪ್ಲ್ಯಾಟ್ ಒಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಅವಘಡ ಸಂಭವಿಸಿದ್ದು,ಈ ಘಟನೆಯಲ್ಲಿ ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಮೃತರನ್ನು ಸಹೈನ್ ಮೂಸಬ್ ( 57) ಎಂದು ಗುರುತಿಸಲಾಗಿದೆ.

ನಗರದ ಅತ್ತಾವರದ ಐವರಿ ಟವರ್ ಎಂಬ ಅಪಾರ್ಟ್ಮೆಂಟ್ ನ ಫ್ಲ್ಯಾಟ್ ವೊಂದರಲ್ಲಿ ಇಂದು ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಅಪಾರ್ಟ್ಮೆಂಟ್ ಬೆಂಕಿ ತಗುಲುವ ವೇಳೆ ಮಹಿಳೆ ಸಹೈನ್ ಮೂಸಬ್ ( 57) ಬಾತ್ ರೂಂ ಗೆ ತೆರಳಿದ್ದರು. ಅವರು ಬೆಂಕಿಯ ಹೊಗೆಗೆ ಬಾತ್ ರೂಂ ನೊಳಗೆ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ.

ಉಡುಪಿ : ನೇಜಾರು ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಬೆಂಗಳೂರಿನ ಪರಪ್ಪನ‌ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ – vishwanews24

ಮನೆಯೊಳಗಿದ್ದ ಮತ್ತೊಬ್ಬರು ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ತಗುಲುವ ಸಂದರ್ಭದಲ್ಲಿ ಮನೆಯಲ್ಲಿ ಒಂಭತ್ತು ಮಂದಿ ಇದ್ದರು. ಬೆಂಕಿ ತಗುಲುವ ವೇಳೆ ಅದರಲ್ಲಿ ಏಳು ಮಂದಿ ಹೊರಬಂದಿದ್ದಾರೆ. ನಂತರ ಇಬ್ಬರು ಒಳಗೆ ಇರುವುದು ತಿಳಿದಿದೆ. ಆದರೆ ಅವರನ್ನು ರಕ್ಷಿಸುವ ವೇಳೆ ಒಬ್ಬರು ಸಾವನ್ನಪ್ಪಿದ್ದು ಮತ್ತೊಬ್ಬರು ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply