ಮಂಗಳೂರು: ಗೋಹತ್ಯೆ ಸಂಪೂರ್ಣ ನಿಷೇಧ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ – vishwanews24
ಮಂಗಳೂರು: ಗೋಹತ್ಯೆ ಸಂಪೂರ್ಣ ನಿಷೇಧ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ..
ಜಿಲ್ಲೆಯಿಂದ 10 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಿಸುವ ಗುರಿ: ಶರಣ್ ಪಂಪ್ ವೆಲ್
ಮಂಗಳೂರು: ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಕೇಂದ್ರ ಸರಕಾರ ಕಾನೂನು ಜಾರಿಗೆ ತರಬೇಕು, ಗೋ ಮಾತೆಯನ್ನು ರಾಷ್ಟ್ರಮಾತೆಯಾಗಿ ಘೋಷಿಸಬೇಕು ಮತ್ತು ಗೋವಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿ ದೇಶಾದ್ಯಂತ “ಗೋಮಾತೆಯ ಗೌರವದ ಅಭಿಯಾನ”ದ ಮೂರನೇ ಹಂತದ ಅಭಿಯಾನ ವಿವಿಧ ಹಿಂದೂ ಪರ ಸಂಘಟನೆಗಳು ಮತ್ತು ಮಠ ಮಂದಿರಗಳ ಸಹಯೋಗದಲ್ಲಿ ನಡೆಯಲಿದ್ದು, ಕರಾವಳಿ ಜಿಲ್ಲೆಗಳ ಅಭಿ ಯಾನಕ್ಕೆ ಶುಕ್ರವಾರ ನಗರದ ವಿಎಚ್ಪಿ ಕಾರ್ಯಾಲಯದಲ್ಲಿ ನಡೆಯಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್ ಪಿ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಜಿಲ್ಲೆಯಲ್ಲಿ 10 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ ಗುರಿ ಹೊಂದಲಾಗಿದೆ. ಇದಕ್ಕಾಗಿ 108 ಮಂದಿಯ ಜಿಲ್ಲಾ ಸಮಿತಿ, 21 ಮಂದಿಯ ತಾಲೂಕು ಸಮಿತಿ, 6 ಮಂದಿಯ ಗ್ರಾಮ ಸಮಿತಿ ರಚಿಸಲಾಗಿದೆ. ಗಣೇಶ ಹಬ್ಬದಲ್ಲೂ ಸಹಿ ಸಂಗ್ರಹ ನಡೆಯಲಿದೆ ಎಂದರು.
30 ಕೋಟಿ ಸಹಿ ಸಂಗ್ರಹ
ಮೊದಲ ಹಂತದಲ್ಲಿ ಫೆಬ್ರವರಿಯಲ್ಲಿ ದೇಶದಲ್ಲಿ 5 ಕೋಟಿ ಸಹಿ ಸಂಗ್ರಹಿಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ. ಜುಲೈಯಲ್ಲಿ ಮುಕ್ತಾಯಗೊಂಡ ಎರಡನೇ ಹಂತದಲ್ಲಿ ಮತ್ತೆ 16 ಕೋಟಿ ಸಹಿ ಸಂಗ್ರಹಿಸಿ ಕೇಂದ್ರ ಸರಕಾರಕ್ಕೆ ತಲುಪಿಸಲಾಗಿದೆ. ಆದರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಮೂರನೇ ಹಂತದಲ್ಲಿ 30 ಕೋಟಿ ಸಹಿ ಸಂಗ್ರಹಿಸಿ, ಆಯಾ ರಾಜ್ಯಗಳ ರಾಜಧಾನಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಿ ರಾಜ್ಯ ಪಾಲರ ಮೂಲಕ ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ. ಡಿ.17ರಂದು ಬೆಂಗಳೂರಿನಲ್ಲಿ 3 ಲಕ್ಷಕ್ಕೂ ಹೆಚ್ಚು ಗೋ ಪ್ರೇಮಿಗಳು ಸೇರಿ ಸಮಾವೇಶ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ರಾಜಸ್ಥಾನದ ಪುಷ್ಕರ್ಶೀತಲ್ ಆಶ್ರಮದ ಗೋಪಾಲಾನಂದ ಸರಸ್ಪತಿ ಜೀ ಮಹಾರಾಜ್ ಈ ಅಭಿಯಾನದ ನೇತೃತ್ವ ವಹಿಸಿದ್ದಾರೆ. ಕೇಂದ್ರ ಸರಕಾರ ಈ ಹಂತದಲ್ಲೂ ಸ್ಪಂದಿಸದಿದ್ದರೆ ಮುಂದಿನ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ಬೃಹತ್ ಸಮಾವೇಶ ನಡೆಸಿ ರಾಷ್ಟ್ರಪತಿಗಳಿಗೆ ನೇರವಾಗಿ ಮನವಿ ಸಲ್ಲಿಸಲಾಗುವುದು
ಎಂದರು.
ಉಡುಪಿ: ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಸ್ಫೋಟಕ ಬಳಸಿ ಬಂಡೆ ಸ್ಫೋಟ; ಇಬ್ಬರ ಬಂಧನ – vishwanews24
ಕೊಂಡಾಣ ಕ್ಷೇತ್ರದ ದುರ್ಗಾನಂದ ಸ್ವಾಮೀಜಿ, ಪ್ರಮುಖರಾದ ಪುರುಷೋ ತಮ್, ಶಿವಾನಂದ ಮೆಂಡನ್, ಆಶೋಕ್ ಇಳಂತಿಲ, ಉದಯ ಶಂಕರ್, ಗಜೇಂದ್ರ, ರಮೇಶ್ ಭಟ್ ಸರವು, ಗೋಪಾಲ ಕುತ್ತಾರ್, ಭರತ್ ಮಂಜನಾಡಿ ಉಪಸ್ಥಿತರಿದ್ದರು.
