ಮಂಗಳೂರು ದಸರಾ- 4ದಿನ ಹೆಚ್ಚುವರಿ ರಜೆ ಆದೇಶ: ಅ.3ರಿಂದ ಅ.16ರವರೆಗೆ ಶಾಲಾ ಮಕ್ಕಳಿಗೆ ರಜೆ – Vishwanews24
ಮಂಗಳೂರು ದಸರಾ ಹಿನ್ನೆಲೆ – 4ದಿನ ಹೆಚ್ಚುವರಿ ರಜೆ ಆದೇಶ: ಅ.3ರಿಂದ ಅ.16ರವರೆಗೆ ಶಾಲಾ ಮಕ್ಕಳಿಗೆ ದಸರಾ ರಜೆ
ಮಂಗಳೂರು: ಮಂಗಳೂರು ದಸರಾ ವಿಜೃಂಭಣೆಯಿಂದ ನಡೆಯುತ್ತಿರುವುದರಿಂದ ಇತ್ತೀಚೆಗೆ ಶಾಸಕ ವೇದವ್ಯಾಸ್ ಕಾಮತ್ ಶಿಕ್ಷಣ ಸಚಿವರಲ್ಲಿ ಮಕ್ಕಳಿಗೆ ರಜೆ ನೀಡಬೇಕೆಂದು ಮನವಿಯನ್ನು ಸಲ್ಲಿಸಿದ್ದರು.

ಇದಕ್ಕೆ ಸ್ಪಂದಿಸಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅ.3 ರಿಂದ ಅ.16ರವರೆಗೆ ನಾಲ್ಕು ದಿನ ಹೆಚ್ಚುವರಿಯಾಗಿ ಮಂಗಳೂರು ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರ ಅನುಮೋದನೆಯ ಅನ್ವಯ ಸರ್ಕಾರವು ಆದೇಶಿಸಿರುವಂತೆ ಮಂಗಳೂರು ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ನವರಾತ್ರಿ ಹಬ್ಬದ ಆಚರಣೆಗೆ ಪೂರಕವಾಗುವಂತೆ ದಸರಾ ರಜೆಯನ್ನು ಸೆ.28ರಿಂದ ಅ.1ರವರೆಗೆ ಹೆಚ್ಚುವರಿಯಾಗಿ 4 ದಿನಗಳು ರಜೆ ನೀಡಿದೆ.
ಆದರೆ ಅ.2ರಂದು ಗಾಂಧಿಜಯಂತಿ ಇರುವುದರಿಂದ ಅದನ್ನು ಕಡ್ಡಾಯವಾಗಿ ಆಚರಿಸಬೇಕು. ಹಾಗೆಯೇ ಹೆಚ್ಚುವರಿಯಾಗಿ ನೀಡಿರುವ 4ದಿನಗಳ ರಜೆಯನ್ನು ನವೆಂಬರ್ ತಿಂಗಳಿನಲ್ಲಿ 4 ಶನಿವಾರ ಪೂರ್ಣದಿನದ ತರಗತಿಗಳನ್ನು ಹಾಗೂ ಎರಡು ಭಾನುವಾರ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ಸರಿದೂಗಿಸಬೇಕು ಎಂದು ಸೂಚನೆ ಹೊರಡಿಸಿದ್ದಾರೆ.
ಮಂಗಳೂರು : ಖಾಸಗಿ ಕಾಲೇಜಿನಿಂದ ನಾಪತ್ತೆಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ – Vishwanews24
