ಮಂಗಳೂರು ಮಳಲಿ ಮಸೀದಿಯಲ್ಲಿ ದೇಗುಲ ಪತ್ತೆ ವಿಚಾರ- ತಂಬೂಲ‌ ಪ್ರಶ್ನೆಗೆ ಕ್ಷಣಗಣನೆ-ಬಿಗಿ ಪೊಲೀಸ್ ಬಂದೋಬಸ್ತು: vishwanews24

Featured, ರಾಜ್ಯ ನ್ಯೂಸ್

ಮಂಗಳೂರು ಮಳಲಿ ಮಸೀದಿಯಲ್ಲಿ ದೇಗುಲ ಪತ್ತೆ ವಿಚಾರ- ಮಳಲಿ ರಾಮಾಂಜನೇಯ ಮಂದಿರದಲ್ಲಿ ತಂಬೂಲ‌ ಪ್ರಶ್ನೆಗೆ ಕ್ಷಣಗಣನೆ-ಬಿಗಿ ಪೊಲೀಸ್ ಬಂದೋಬಸ್ತು: vishwanews24

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಏಪ್ರಿಲ್ 21ರಂದು ಮಸೀದಿ ನವೀಕರಣದ ವೇಳೆ ಹಿಂದೂ ದೇಗುಲ ಶೈಲಿಯ ಕುರುಹುಗಳು ದೊರೆತಿದ್ದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಇಂದು ತಾಂಬೂಲ ಪ್ರಶ್ನಾ ಚಿಂತನೆಯನ್ನು ಆಯೋಜಿಸಿದೆ.


ಹಿಂದೂಗಳ ಧಾರ್ಮಿಕ ನಂಬುಗೆಯ ಪ್ರಕಾರ, ಪುರಾಣದ ಸತ್ಯಾನುಸತ್ಯತೆಯನ್ನು ಜ್ಯೋತಿಷ್ಯದ ಉನ್ನತ ಸ್ಥಾನದಲ್ಲಿರುವ ಅಷ್ಟಮಂಗಲದಿಂದ ತಿಳಿಯಲು ಸಾಧ್ಯವಿದೆ. ಈ ಅಷ್ಟಮಂಗಲ ಏರ್ಪಡಿಸಿ ಮಳಲಿಯ ಮಸೀದಿಯಲ್ಲಿ ಪತ್ತೆಯಾದ ದೇಗುಲ ಶೈಲಿಯ ಇತಿಹಾಸವನ್ನು ಅರಿಯಲು ಹಿಂದೂ ಸಂಘಟನೆಗಳು ನಿರ್ಧರಿಸಿವೆ. ಅಷ್ಟಮಂಗಲವನ್ನು ಯಾವಾಗ ನಡೆಸಬೇಕು, ಎಲ್ಲಿ ನಡೆಸಬೇಕು, ಯಾವ ದೈವಿಕ ಶಕ್ತಿಯಿದೆ ಎಂಬುದನ್ನು ತಿಳಿಯಲು ತಾಂಬೂಲ ಪ್ರಶ್ನಾ ಚಿಂತನೆಗೆ ನಿರ್ಧರಿಸಲಾಗಿದೆ.


ಮಳಲಿಯ ಮಸೀದಿಯ ಸಮೀಪದಲ್ಲಿರುವ ಶ್ರೀರಾಮಂಜನೇಯ ಭಜನಾ ಮಂದಿರದಲ್ಲಿ ಬೆಳಿಗ್ಗೆ 8 ಗಂಟೆಗೆ ತಾಂಬೂಲ ಪ್ರಶ್ನಾ ಚಿಂತನೆ ನಡೆಯಲಿದೆ.
ಮಂಗಳೂರು ಸೋಮೇಶ್ವರ ಮೂಲದ ಗೋಪಾಲಕೃಷ್ಣ ಪಣಿಕ್ಕರ್ ಪ್ರಶ್ನಾ ಚಿಂತನೆ ನಡೆಯಲಿದೆ.


ಸ್ಥಳದಲ್ಲಿ ಬಿಗಿ‌ ಪೊಲೀಸ್ ಬಂದೋಬಸ್ತು ಏರ್ಪಾಡಿಸಲಾಗಿದೆ,ಸೆಕ್ಷನ್ 144 ಜಾರಿಯಲ್ಲಿದೆ.

Leave a Reply