ಮಂಗಳೂರು: ಮುಂದಿನ ಏಷ್ಯನ್ ಗೇಮ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆಲ್ಲುವೆ : ಪೂವಮ್ಮ – vishwanews24
ಮಂಗಳೂರು: ಮುಂದಿನ ಏಷ್ಯನ್ ಗೇಮ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆಲ್ಲುವೆ : ಪೂವಮ್ಮ
ಮಂಗಳೂರು: ಬದುಕಿನಲ್ಲಿ ಅನೇಕ ಏಳು ಬೀಳು ಗಾಯದ ಸಮಸ್ಯೆ ಎದುರಿಸಿದ್ದೇನೆ. ಸೋತು ಗೆದ್ದಿದ್ದೇನೆ. ಎಲ್ಲವನ್ನು ಬದುಕಿನಲ್ಲಿ ನೋಡಿದ್ದೇನೆ. ಸಾಧನೆಗೆ ವಯಸ್ಸು ಅಡ್ಡಿಯಾಗದು. ಮುಂದಿನ ಏಷ್ಯನ್ ಗೇಮ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕದೊಂದಿಗೆ ವಾಪಸಾಗುವೆನು ಎಂದು ಎಂದು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಎಂ.ಆರ್. ಪೂವಮ್ಮ ತಿಳಿಸಿದರು.
ಏಷ್ಯನ್ ಗೇಮ್ಸ್ನ 4×400 ಮೀ. ಮಹಿಳೆಯರ ರಿಲೇ ಸ್ಪರ್ಧೆಯಲ್ಲಿ ಚಿನ್ನ ಮತ್ತು 4×400 ಮೀ. ಮಿಶ್ರ ರಿಲೇ ಬೆಳ್ಳಿ ಪದಕ ಗೆದ್ದು ಮಂಗಳೂರಿಗೆ ಆಗಮಿಸಿದ ಅವರು, ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿ ಮೊಹ್ತಿಶ್ಯಾಂ ಹಾಗೂ ಸಿಟಿ ಸೆಂಟರ್ ವತಿಯಿಂದ ಸನ್ಮಾನ ಸ್ವೀಕರಿಸಿ, ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ವೇಳೆ ಪೂವಮ್ಮ ಅವರ ತಾಯಿ ಜಾಜಿ ರಾಜು, ತಂದೆ ಎಂಜಿ ರಾಜು, ಪತಿ ಜಿತಿನ್ ಪಾಲ್, ಮೊಹ್ತಿಶ್ಯಾಂ ಸಂಸ್ಥೆಯ ನಿರ್ದೇಶಕರಾದ ಸೈಯದ್ ಮುಹಮ್ಮದ್ ಅರ್ಶದ್, ಸೈಯದ್ ಮುಹಮ್ಮದ್ ಸವೊದ್, ಪೂವಮ್ಮರ ತರಬೇತುದಾರ ದಿನೇಶ್ ಕುಂದರ್, ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಮುಡಾ ಮಾಜಿ ಅಧ್ಯಕ್ಷ ತೇಜೋಮಯ, ದಾಯ್ಜಿವರ್ಲ್ಡ್ ಮಾಧ್ಯಮದ ಅಲೆಕ್ಸ್ ಮತ್ತಿತರರು ಉಪಸ್ಥಿತರಿದ್ದರು.
