ಮಂಗಳೂರು : ವಾರಣಾಸಿಯ ಜ್ಞಾನವಾಪಿ ಮಂದಿರದ ಬಾವಿಯಲ್ಲಿ ಶಿವಲಿಂಗ ಪತ್ತೆ : ಪುರಾಣಗಳ ಉಲ್ಲೇಖ ಸತ್ಯ ಎಂದು ಸಾಬೀತು : ಪೇಜಾವರ ಶ್ರೀ – Vishwanews24
ಇತಿಹಾಸದ ಅತಿಕ್ರಮಗಳೆಲ್ಲವನ್ನೂ ಸಾಬೀತು ಮಾಡಿ, ಭಾರತೀಯ ಸನಾತನ ಸಂಸ್ಕೃತಿಗೆ ವಿಜಯ ದೊರಕಲೆಂದು ಆಶಿಸುತ್ತೇವೆ..
ಜೂನ್ 1ರಂದು ಶ್ರೀರಾಮ ಮಂದಿರದ ಗರ್ಭಗುಡಿ ಶಿಲಾನ್ಯಾಸ
ಕರ್ನಾಟಕದಿಂದಲೇ ಹೋಗಿರುವ ಶಿಲೆಗಳಿಂದ ಗರ್ಭಗುಡಿ ಫ್ಲ್ಯಾಟ್ ಫಾರ್ಮ್ ನಿರ್ಮಾಣ
ಮಂಗಳೂರು: ವಾರಣಾಸಿಯ ಜ್ಞಾನವಾಪಿ ಮಂದಿರದ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿರುವುದರಿಂದ ನಮ್ಮ ಈ ತನಕದ ನಂಬಿಕೆಗಳು, ಪುರಾಣಗಳ ಉಲ್ಲೇಖಗಳು ಸತ್ಯ ಎಂಬುದು ಸಾಬೀತಾಗಿದೆ. ಇದನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಮಾತ್ರವಲ್ಲದೆ ಇಂತಹ ಇತಿಹಾಸದ ಅತಿಕ್ರಮಗಳೆಲ್ಲವನ್ನೂ ಸಾಬೀತು ಮಾಡಿ, ಭಾರತೀಯ ಸನಾತನ ಸಂಸ್ಕೃತಿಗೆ ವಿಜಯ ದೊರಕಲೆಂದು ಆಶಿಸುತ್ತೇವೆ. ಇವೆಲ್ಲವೂ ಕೋರ್ಟ್ ತೀರ್ಪಿನಂತೆ ನಡೆಯುತ್ತಿದ್ದು, ಯಾರೂ ಸಂಘರ್ಷಕ್ಕೆ ಇಳಿಯದೆ ಸ್ವಾಗತಿಸಬೇಕು ಎಂದರು.
ಜೂನ್ 1ರಂದು ಗರ್ಭಗುಡಿ ಶಿಲಾನ್ಯಾಸ:
ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ನಿರ್ಮಾಣ ಕಾರ್ಯ ಆರಂಭವಾಗಿದ್ದು, 2024ರ ಜನವರಿ ತಿಂಗಳ ಉತ್ತರಾಯಣ ಪ್ರಾರಂಭದಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾಪನಾ ಕಾರ್ಯ ನಡೆಸಲು ಎಂದು ನಿಶ್ಚಯಿಸಲಾಗಿದೆ. ಅದಕ್ಕೆ ಬೇಕಾದ ಪೂರ್ವಭಾವಿ ಕಾರ್ಯಗಳೆಲ್ಲಾ ನಿಗದಿತ ಕಾಲದಲ್ಲಿಯೇ ನಡೆಯುತ್ತಿದೆ. ಆರಂಭದಲ್ಲಿ ಭೂಮಿ ಗಟ್ಟಿಗೊಳಿಸುವ ಕಾರ್ಯ ನಡೆದಿದ್ದು, ಅದರ ಮೇಲೆ ನಡೆಯುವ ಫ್ಲ್ಯಾಟ್ ಫಾರ್ಮ್ ರಚನೆಯೂ ಸಂಪೂರ್ಣಗೊಳ್ಳುತ್ತಾ ಬಂದಿದೆ. ಕರ್ನಾಟಕದಿಂದಲೇ ಹೋಗಿರುವ ಶಿಲೆಗಳಿಂದ ಫ್ಲ್ಯಾಟ್ ಫಾರ್ಮ್ ನಿರ್ಮಾಣವಾಗಿದೆ. ಗರ್ಭಗುಡಿಯ ಶಿಲಾನ್ಯಾಸ ಜೂನ್ 1ರಂದು ನಡೆಯಲಿದ್ದು, ಆ ಕಾರ್ಯಕ್ರಮದಲ್ಲಿಯೂ ಭಾಗವಹಿಸುತ್ತಿರುವುದಾಗಿ ಸ್ವಾಮೀಜಿ ತಿಳಿಸಿದರು.
ನೀವು ಬಳಸುತ್ತಿರುವ ಎಣ್ಣೆಯಲ್ಲಿ ಸೂರ್ಯಕಾಂತಿಯೂ ಇಲ್ಲ, ಕಡಲೆ ಬೀಜವೂ ಇಲ್ಲ: ಶೋಭಾ ಕರಂದ್ಲಾಜೆ – Vishwnaews24
