ಮಂಗಳೂರು: ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ತಂದೆ ಅಸ್ವಸ್ಥ , ಆಸ್ಪತ್ರೆಗೆ ದಾಖಲು   – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ತಂದೆ ಅಸ್ವಸ್ಥ , ಆಸ್ಪತ್ರೆಗೆ ದಾಖಲು  

ಮಂಗಳೂರು: ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ತಂದೆ ಶೇಖರ ಪೂಜಾರಿ ಅವರು ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಸಲುವಾಗಿ ಬೆಳ್ಳಾರೆಯ ಭಾರಧ್ವಾಜ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಶೇಖರ ಪೂಜಾರಿ ಅವರು ಹೃದ್ರೋಗದಿಂದ ಬಳಲುತ್ತಿದ್ದಾರೆ. ಕುಟುಂಬಕ್ಕೆ ಆಧಾರಸ್ತಂಭದಂತಿದ್ದ ಒಬ್ಬನೇ  ಮಗನನ್ನು ಕಳೆದುಕೊಂಡ ಬಳಿಕ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ.

ಇಸಿಜಿ ಮಾಡಿಸುವ ಸಲುವಾಗಿ ಶೇಖರ ಪೂಜಾರಿ ಅವರನ್ನು ಬೆಳ್ಳಾರೆಯ ಭಾರದ್ವಾಜ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದೊಯ್ಯಲಾಯಿತು

ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರು ನೆಟ್ಟಾರು ಗ್ರಾಮದಲ್ಲಿರುವ ಪ್ರವೀಣ್ ಅವರ ಮನೆಗೆ ಗುರುವಾರ ಭೇಟಿ ನೀಡಿದರು. ಅವರ ಜೊತೆ ನೋವು ತೋಡಿಕೊಳ್ಳುವಾಗ ಶೇಖರ ಅವರು ಮತ್ತಷ್ಟು ಆಘಾತಕ್ಕೊಳಗಾಗಿ ಕುಸಿದು ಬಿದ್ದರು.

ಅಗತ್ಯ ಬಂದಲ್ಲಿ ಉತ್ತರ ಪ್ರದೇಶ ಮಾದರಿಯಲ್ಲೇ ರಾಜ್ಯದಲ್ಲಿ ಕ್ರಮ ಜಾರಿಗೊಳಿಸಲಾಗುವುದು : ಸಿಎಂ ಬೊಮ್ಮಾಯಿ – Vishwanews24

Leave a Reply