ಮಂಡ್ಯ ಹನುಮ‌ ಧ್ವಜ ವಿವಾದ : ಬಿಜೆಪಿಗರು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ : ಎಚ್ಚರಿಕೆ ನೀಡಿದ ಡಿಕೆಶಿ – vishwanews24

Featured, ರಾಜ್ಯ ನ್ಯೂಸ್

ಮಂಡ್ಯ ಹನುಮ‌ ಧ್ವಜ ವಿವಾದ : ಬಿಜೆಪಿಗರು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ : ಎಚ್ಚರಿಕೆ ನೀಡಿದ ಡಿಕೆಶಿ

ಬೆಂಗಳೂರು: ಮಂಡ್ಯದಲ್ಲಿ ಹನುಮ‌ ಧ್ವಜ ವಿವಾದದಲ್ಲಿ ಬಿಜೆಪಿಗರಿಗೆ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯದ ಕೆರಗೋಡು ಹನುಮ ಧ್ವಜ ವಿಚಾರದಲ್ಲಿ ಬಿಜೆಪಿ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರಿಗೆ ಬೇಸಿಕ್ ಕಾಮನ್ ಸೆನ್ಸ್ ಇಲ್ಲ. ರಾಜಕೀಯ ಮಾಡಬೇಕು ಆದರೆ ಧರ್ಮದಲ್ಲಿ ರಾಜಕೀಯ ಮಾಡಬಾರದು ಎಂದರು. ಅವರು ರಾಜಕೀಯ ಮಾಡ್ತಿದ್ದಾರೆ, ಮಾಡ್ಲಿ. ಆದರೆ ಸರ್ಕಾರ ಯಾರಿಗೂ ಕಾನೂನು ಕೈಗೆತ್ತಿಗೊಳ್ಳಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಡಬ : Bigg Boss ಡ್ರೋನ್‌ ಪ್ರತಾಪ್‌ ಸೋಲು:  ಅರ್ಧ ಗಡ್ಡ, ಮೀಸೆ ತೆಗೆದ ಯುವಕ – vishwanews24

ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ

ಇನ್ನು ಇದೇ ವಿಚಾರವಾಗಿ ಬಿಜೆಪಿಯಿಂದ ರಾಜ್ಯಾಧ್ಯಂತ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರಿನಲ್ಲೂ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ನಿರತ ಕಾರ್ಯಕರ್ತರು ಹಾಗೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply