ಮಲ್ಪೆ : ಹಿಜಬ್ ಪರವಾಗಿ ಗೋಡೆ ಬರಹ ; ಪ್ರಕರಣ ದಾಖಲು – Vishwanews24

Featured, ಉಡುಪಿ

ಮಲ್ಪೆ : ಹಿಜಬ್ ಪರವಾಗಿ ಗೋಡೆ ಬರಹ ; ಪ್ರಕರಣ ದಾಖಲು – Vishwanews24

ಮಲ್ಪೆ : ಕಿಡಿಗೇಡಿಗಳು ಹಿಜಬ್ ಪರವಾಗಿ ಗೋಡೆ ಬರಹ ಬರೆದಿರುವ ಘಟನೆ ಮಲ್ಪೆಯ ಬೈಲಕೆರೆ ಪರಿಸರದಲ್ಲಿ ನಡೆದಿದ್ದು, ಸ್ಥಳದಲ್ಲಿ ನೂರಾರು ಜನ ಸೇರಿದ ಹಿನ್ನಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಬೈಲಕೆರೆಯಲ್ಲಿರುವ ಅನಧಿಕೃತ ಕಟ್ಟಡವೊಂದರ ಗೋಡೆಯಲ್ಲಿ ಬರಹ ಕಂಡುಬಂದಿದೆ. “ಹಿಜಾಬ್ ಮೂವ್ ಮೆಂಟ್”, “ಹಿಜಾಬ್ ಈಸ್ ಅವರ್ ರೈಟ್” ಎಂಬ ಗೋಡೆ ಬರಹ ಪತ್ತೆಯಾಗಿದೆ.

ಈ ಸುದ್ದಿ ತಿಳಿಯುತ್ತಿದ್ತಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಯುವಕರು ಜಮಾಯಿಸಿದ್ದಾರೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿರುವವರನ್ನು ಬಂಧಿಸುವಂತೆ ಆಗ್ರಹ ಮಾಡಿದ್ದಾರೆ. ಸ್ಥಳಕ್ಕೆ ವೃತ್ತನಿರೀಕ್ಷಕ ಶರಣಬಸವ ಪಾಟೀಲ್ ಭೇಟಿ ನೀಡಿದ್ದು, ಯುವಕರ ಮನವೊಲಿಕೆ ಕಾರ್ಯ ಮಾಡಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಣ್ಣಗಳ ಹಬ್ಬ ಹೋಳಿ ಹಬ್ಬ : ದೇಶದ ಜನತೆಗೆ  ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ – Vishwanews24

Leave a Reply