ಮಹಾತ್ಮ ಗಾಂಧಿ ಮಾಡಿದ ತಪ್ಪಿನಿಂದ ನೆಹರು ಈ ದೇಶದ ಮೊದಲ ಪ್ರಧಾನಿಯಾದರು : ಬಸನಗೌಡ ಪಾಟೀಲ್ ಯತ್ನಾಳ್ -Vishwanews24
ಬಾಗಲಕೋಟೆ; ಮಹಾತ್ಮ ಗಾಂಧಿ ಮಾಡಿದ ದೊಡ್ಡ ತಪ್ಪಿನಿಂದ ವಿಲಾಸಿ ಜೀವನ ನಡೆಸುತ್ತಿದ್ದ ನೆಹರು ಅಂತಹ ಓರ್ವ ಅಯೋಗ್ಯ ವ್ಯಕ್ತಿ ಈ ದೇಶದ ಮೊದಲ ಪ್ರಧಾನಿಯಾದರು ಎಂದು ವಿಜಾಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆ ತೇರದಾಳದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ತಪ್ಪಿನಿಂದ ವಿಲಾಸಿ ಜೀವನ ಮಾಡುತ್ತಿದ್ದ ನೆಹರು ಪ್ರಧಾನಿಯಾದ. ಅವನಿಗೆ ಸಿಗರೇಟ್ ಲಂಡನ್ನಿಂದ ಬರುತ್ತಿತ್ತು. ಬಟ್ಟೆ ದೋಬಿಗೆ (ಕ್ಲೀನಿಂಗ್) ಲಂಡನ್ಗೆ ಹೋಗುತ್ತಿದ್ದವು. ಇವರು ಬಡವರ ಬಗ್ಗೆ ಮಾತನಾಡುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್ ಹೇಗೆ ಸತ್ತರು ಇಂದಿಗೂ ಯಾರೂ ಹೇಳುತ್ತಿಲ್ಲ ಎಂದು ಏಕವಚನದಲ್ಲಿಯೇ ವಾಗ್ದಾಳಿ ಮಾಡಿದರು.
ಅವನಿಗೆ ಸಿಗರೇಟ್ ಲಂಡನ್ನಿಂದ ಬರ್ತಾ ಇತ್ತು. ಬಟ್ಟೆ ಕ್ಲೀನ್ ಮಾಡಲು ಸಹ ದೋಬಿಗೆ ಲಂಡನ್ ಹೋಗ್ತಾ ಇದ್ವು. ಇವರು ಬಡತನದ ಬಗ್ಗೆ ಮಾತನಾಡುತ್ತಾರೆ” ಎಂದು ಏಕವಚನದಲ್ಲಿ ನೆಹರು ವಿರುದ್ಧ ಕಿಡಿಕಾರಿದ್ದಾರೆ. ಈ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
