ಮಹಾರಾಷ್ಟ್ರ : ಟ್ರಕ್ ಮತ್ತು ಪಿಕಪ್ ನಡುವೆ ಭೀಕರ ಅಪಘಾತ ; ಮೂವರು ಮಕ್ಕಳು ಸೇರಿ 8 ಮಂದಿ ದುರ್ಮರಣ – vishwanews24

Featured, ರಾಷ್ಟ್ರ ನ್ಯೂಸ್

ಮಹಾರಾಷ್ಟ್ರ :  ಟ್ರಕ್ ಮತ್ತು ಪಿಕಪ್ ನಡುವೆ ಭೀಕರ ಅಪಘಾತ ; ಮೂವರು ಮಕ್ಕಳು ಸೇರಿ 8 ಮಂದಿ ದುರ್ಮರಣ

ಮುಂಬೈ: ಟ್ರಕ್ ಮತ್ತು ಪಿಕಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ನಾಗ್ಪುರ-ರಾಯ್‌ಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಪಿಂಪಲ್‌ಗಾಂವ್ ಪ್ರದೇಶದಲ್ಲಿ ಇಂದು (ಸೆ.11) ಮುಂಜಾನೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇತರ ಮೂವರನ್ನು ತಕ್ಷಣವೇ ಸಕೋಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: 

ಪೋಪ್ ಲಿಯೋ XIV ಅವರನ್ನು ಭೇಟಿಯಾದ ಉಡುಪಿ ಬಿಷಪ್ ಲೆಸ್ಲಿ ಸಿ ಡಿಸೋಜಾ – vishwanews24

ಅಪಘಾತದ ನಂತರ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಶವಾಗಾರಕ್ಕೆ ರವಾನಿಸಲಾಗಿದೆ.

ಅಪಘಾತದ ಬಳಿಕ ಈ ಪ್ರದೇಶದಲ್ಲಿ ಸಂಚಾರಕ್ಕೆ ಸ್ವಲ್ಪ ಅಡಚಣೆ ಉಂಟಾಗಿತ್ತು. ಅಪಘಾತಕ್ಕೆ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: 

ಉಡುಪಿ : ಗಣೇಶೋತ್ಸವ ಸಮಿತಿ ಸದಸ್ಯರ ಪೂರ್ವಭಾವಿ ಸಭೆ – vishwanews24

Leave a Reply