ಮುಲ್ಕಿ:ಅಧಿಕಾರ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಜನಸೇವಕನಾಗಿಯೇ ಇರುತ್ತೇನೆ:  ಅಭಯಚಂದ್ರ ಜೈನ್ -Vishwanews24

Featured, ರಾಜ್ಯ ನ್ಯೂಸ್

ಮುಲ್ಕಿ:ಅಧಿಕಾರ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಜನಸೇವಕನಾಗಿಯೇ ಇರುತ್ತೇನೆ:  ಅಭಯಚಂದ್ರ ಜೈನ್ -Vishwanews24

ಮುಲ್ಕಿ: ಮುಲ್ಕಿ ಸಮೀಪದ ಕೆ.ಎಸ್. ರಾವ್ ನಗರ ಲಿಂಗಪ್ಪಯ್ಯಕಾಡು ಶ್ರೀ ಶಿವಯೋಗೇಶ್ವರ ಮಂದಿರದಲ್ಲಿ ಶ್ರೀ ಮಹಾಗಣಪತಿ ಮತ್ತು ಶ್ರೀ ಸಾಂಬ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಹಾಗೂ ಕುಂಭಾಭಿಷೇಕ ಕೊಲಕಾಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ನೇತೃತ್ವದಲ್ಲಿ ನಡೆಯಿತು.

ಧಾರವಾಡ ನಯಾನಗರ ಸಿದ್ಧ ಸುಕ್ಷೇತ್ರದ ಗುರು ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.‌ ಮಾಜಿ ಸಚಿವ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಲಿಂಗಪ್ಪಯ್ಯಕಾಡಿನ ಉತ್ತರ ಕರ್ನಾಟಕದ ನಾಗರಿಕರ ಆಶೋತ್ತರಗಳನ್ನು ಜನಸೇವಕನಾಗಿ ಈಡೇರಿಸಿದ್ದು, ಅಧಿಕಾರ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಜನಸೇವಕನಾಗಿಯೇ ಇರುತ್ತೇನೆ ಎಂದರು.

ಅನಗತ್ಯವಾದ ಬಿಪಿಎಲ್‌ ಕಾರ್ಡ್‌ಗಳನ್ನು ‌ ಹೊಂದಿರುವವರು ವಾಪಾಸ್‌ ನೀಡಿ : ಸಿಎಂ ಬಿಎಸ್ ಯಡಿಯೂರಪ್ಪ -Vishwanews24

ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ನ.ಪಂ. ಸದಸ್ಯ ಮಂಜುನಾಥ ಕಂಬಾರ, ಸಂದೀಪ್ ಕುಮಾರ್, ಮುನ್ನ ಯಾನೆ ಮಹೇಶ, ಉದ್ಯಮಿ ಜೀವನ ಶೆಟ್ಟಿ ಕಾರ್ನಾಡ್, ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಶಿವಯೋಗೇಶ್ವರ ಮಂದಿರ ಅಧ್ಯಕ್ಷ ಗೊಳಾಲಪ್ಪ ತಮಗೊಂಡ ಮತ್ತಿತರರು ಉಪಸ್ಥಿತರಿದ್ದರು.

ಬಾಹ್ಯಾಕಾಶದಲ್ಲಿ ಭಗವದ್ಗೀತೆ, ಮೋದಿ ಫೋಟೋದೊಂದಿಗೆ ಫೆ.28ರಂದು ಉಪಗ್ರಹ ಮೂಲಕ ರವಾನಿಸಲಿದೆ ಇಸ್ರೋ -Vishwanews24

ಮಲ್ಲಣ್ಣ ಗೌಡ ನಿರೂಪಿಸಿದರು. ಶಾಸಕ ಉಮಾನಾಥ ಕೋಟ್ಯಾನ್, ಮುಲ್ಕಿ ನ.ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ನ.ಪಂ. ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಂದಿರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.