ಮೈಸೂರು ಕಂಬಳದ ಕುರಿತು ಇದುವರೆಗೆ ಯಾವುದೇ ಅಧಿಕೃತ ಸಂವಹನ ನಡೆದಿಲ್ಲ : ದೇವಿಪ್ರಸಾದ್ ಶೆಟ್ಟಿ ಬೆಳಪು – vishwanews24

Featured, ದಕ್ಷಿಣ ಕನ್ನಡ

ಮೈಸೂರು ಕಂಬಳಕ್ಕೆ ಅಧಿಕೃತ ಆಹ್ವಾನ ಬಂದ ಬಳಿಕವಷ್ಟೇ ಅಂತಿಮ ನಿರ್ಧಾರ: ದೇವಿಪ್ರಸಾದ್ ಶೆಟ್ಟಿ ಬೆಳಪು

ಮೂಡುಬಿದಿರೆ: ಮೈಸೂರಿನಲ್ಲಿ ಕಂಬಳ ಆಯೋಜಿಸುವ ಸಂಬಂಧ ಇದುವರೆಗೆ ಜಿಲ್ಲಾ ಕಂಬಳ ಸಮಿತಿಗಾಗಲಿ ಅಥವಾ ರಾಜ್ಯ ಕಂಬಳ ಅಸೋಸಿಯೇಷನ್‌ಗಾಗಲಿ ಯಾವುದೇ ಅಧಿಕೃತ ಲಿಖಿತ ಆಹ್ವಾನ ಇಲ್ಲವೇ ಪತ್ರ ಬಂದಿಲ್ಲ. ಅಧಿಕೃತ ಪ್ರಸ್ತಾವನೆ ಬಂದ ನಂತರವೇ ವಿಶೇಷ ಸಭೆ ಕರೆದು, ಕೋಣಗಳನ್ನು ಕರೆದೊಯ್ಯುವ ಹಾಗೂ ಸಹಕಾರ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ಮೂಡುಬಿದಿರೆಯ ಕಡಲಕೆರೆ ಸೃಷ್ಟಿ ಗಾರ್ಡನ್​​ನಲ್ಲಿ ಮಂಗಳವಾರ (ಸೆಪ್ಟೆಂಬರ್ 8ರಂದು) ನಡೆದ ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿಯ ಜಂಟಿ ಮಹತ್ವದ ಸಮಾಲೋಚನಾ ಸಭೆಯ ಬಳಿಕ ಅವರು ಈ ಮಾಹಿತಿ ನೀಡಿದರು.

ಬೆಂಗಳೂರು: ಆಹಾರ ಮತ್ತು ದಿನಬಳಕೆ ವಸ್ತುಗಳ ಮಾರಾಟ ಅಂಗಡಿಗಳ ಮೇಲೆ ಆರೋಗ್ಯ ಅಧಿಕಾರಿಗಳ ದಾಳಿ – vishwanews24

ಅಧಿಕೃತ ಪತ್ರ ಬಂದ ಬಳಿಕ ಪ್ರತ್ಯೇಕ ಸಭೆ: ಮೈಸೂರು ಕಂಬಳದ ಕುರಿತು ಇದುವರೆಗೆ ಯಾವುದೇ ಅಧಿಕೃತ ಸಂವಹನ ನಡೆದಿಲ್ಲ. ಕೇವಲ ಅನಧಿಕೃತ ಚರ್ಚೆಗಳಷ್ಟೇ ನಡೆದಿವೆ. ಅಧಿಕೃತ ಆಹ್ವಾನ ಪತ್ರ ಬಂದ ಕೂಡಲೇ ಕಂಬಳ ಸಮಿತಿಯ ಪ್ರತ್ಯೇಕ ಸಭೆಯನ್ನು ಕರೆಯಲಾಗುವುದು. ಅಲ್ಲಿ ಕರಾವಳಿಯಿಂದ ಎಷ್ಟು ಜೋಡಿ ಕೋಣಗಳನ್ನು ಕಳುಹಿಸಬೇಕು, ಯಾವ ರೀತಿ ಸಾರಿಗೆ ಹಾಗೂ ವ್ಯವಸ್ಥೆ ಮಾಡಬೇಕು ಎಂಬ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ಮಂಗಳೂರು: ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿದ್ದ ಯುವಕ ನಾಪತ್ತೆ – vishwanews24

 

Leave a Reply