ಮೊಟ್ಟೆ ವಿವಾದ : ಬಿಜೆಪಿಯ ಗೂಂಡಾಗಿರಿಗೆ ಹೋರಾಟದ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ : ಸಿದ್ದರಾಮಯ್ಯ – Vishwanews24
ಮೊಟ್ಟೆ ವಿವಾದ : ಬಿಜೆಪಿಯ ಗೂಂಡಾಗಿರಿಗೆ ಹೋರಾಟದ ಮೂಲಕವೇ ತಕ್ಕ ಉತ್ತರ
ಕೊಡುತ್ತೇವೆ ..
ಪೊಲೀಸರ ಕರ್ತವ್ಯ ಲೋಪ ಖಂಡಿಸಿ ಆಗಸ್ಟ್ 26 ರಂದು ಕೊಡಗು ಎಸ್ಪಿ ಕಚೇರಿ ಮುತ್ತಿಗೆಗೆ
ಸಿದ್ದರಾಮಯ್ಯ ಕರೆ
ಕೊಡಗು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗಿಗೆ ಆಗಮಿಸಿದ್ದ ವೇಳೆ ಅವರ ಕಾರಿಗೆ ಸಂಘ ಪರಿವಾರದ ಕಾರ್ಯಕರ್ತರು ಮೊಟ್ಟೆ ಹೊಡೆದು ವಿರೋಧ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಚಾರವಾಗಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೊಡಗು ಜಿಲ್ಲಾ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ದ ಹರಿಹಾಯ್ದಿದ್ದಾರೆ. ಕೊಡಗಿನ ಗುಡ್ಡೆಹೊಸೂರುವಿನಲ್ಲಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಎಸೆದಿದ್ದು, ಬಿಜೆಪಿಯ ಕೆಲ ಕಾರ್ಯಕರ್ತರನ್ನ ಕುಶಾಲನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದರೆ ಇದೇ ಪೊಲೀಸರ ವಿರುದ್ದ ಈಗ ಸಿದ್ದರಾಮಯ್ಯ ಕೆಂಡಾ ಮಂಡಲರಾಗಿದ್ದಾರೆ. ಪೊಲೀಸ್ ಭದ್ರತಾ ವೈಫಲ್ಯದ ಬಗ್ಗೆ, ಪೊಲೀಸರ ವಿರುದ್ದವೇ ಸಿದ್ದು ಗುಡುಗಿದ್ದು, ಅವರನ್ನು ಒದ್ದು ಒಳಗೆ ಹಾಕಲು ಆಗೋದಿಲ್ವಾ ನಿಮಗೆ. ಆರ್ಎಸ್ಎಸ್ ಗೂಂಡಗಳೊಂದಿಗೆ ಶಾಮೀಲಾಗಿದ್ದೀರಾ. ಪ್ರತಿಭಟನೆಗೆ ಬಿಟ್ಟು ತಮಾಷೆ ನೋಡ್ತೀರ ಎಂದು ಸಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಾವೇನು ಸುಮ್ಮನೆ ಕೂರುವುದಿಲ್ಲ ಆಗಸ್ಟ್ 26 ರಂದು ಕೊಡಗು ಎಸ್ಪಿ ಕಚೇರಿ ಮುತ್ತಿಗೆಗೆ ಸಿದ್ದು ಕರೆ ನೀಡಿದ್ದು, ನಾನು ಆ ದಿನ ಮಡಿಕೇರಿಗೆ ಬರುವುದಾಗಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆ ಸಂಘಪರಿವಾರದ ಕೈಗೊಂಬೆಯಾಗಿದೆ.@BJP4Karnataka ಪಕ್ಷದ ಪುಂಡರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪ ಖಂಡಿಸಿ ಈ ತಿಂಗಳ 26 ರಂದು ಕೊಡಗಿನ ಎಸ್.ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ.
ಬಿಜೆಪಿಯ ಗೂಂಡಾಗಿರಿಗೆ ಹೋರಾಟದ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ.
— Siddaramaiah (@siddaramaiah) August 19, 2022
