ರಾಜ್ಯದಲ್ಲಿ ಇನ್ಮುಂದೆ ಮಾಸ್ಕ್‌ ಕಡ್ಡಾಯ : ಸಿಎಂ ನೇತೃತ್ವದ ಸಭೆಯಲ್ಲಿ ತೀರ್ಮಾನ – Vishwanews24

Featured, ರಾಜ್ಯ ನ್ಯೂಸ್

ರಾಜ್ಯದಲ್ಲಿ ಇನ್ಮುಂದೆ ಮಾಸ್ಕ್‌ ಕಡ್ಡಾಯ : ಸಿಎಂ ನೇತೃತ್ವದ ಸಭೆಯಲ್ಲಿ ತೀರ್ಮಾನ – Vishwanews24

ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಮಾಸ್ಕ್‌ ಕಡ್ಡಾಯ ಮಾಡಲಾಗಿದ್ದು, ಈ ಬಗ್ಗೆ ಇಂದು ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಈ ಕುರಿತು ಸಭೆ ಬಳಿಕ ಸಚಿವ ಸುಧಾಕರ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಲಸಿಕೆ ಅಭಿಯಾನಕ್ಕೆ ಒತ್ತು ನೀಡಲಾಗುವುದು, ಇದಲ್ಲದೇ ಸೋಂಕು ಹೆಚ್ಚು ಇರುವ ದೇಶದಿಂದ ಬರೋರ ಮೇಲೆ ನಿಗ ಇಡಲಾಗುವುದು, ಇನ್ನೂ ಕೊರೊನಾ ಸೋಂಕಿನ ಬಗ್ಗೆ ಶೀಘ್ರದಲ್ಲಿ ಮಾರ್ಗಸೂಚನೆ ಬಿಡುಗಡೆ ಮಾಡಲಾಗುವುದು ಎಂದರು.

ಸದ್ಯ ಬೆಂಗಳೂರಿನಲ್ಲಿ ಪಾಸಿಟಿವ್‌ ರೇಟ್‌ ದರ ಹೆಚ್ಚಳವಾಗಿದ್ದು, ಎಲ್ಲ ರೀತಿಯಲ್ಲಿ ಈ ಬಗ್ಗೆ ಗಮನ ಹರಿಸಲಾಗುತ್ತಿದೆ, ಇದಲ್ಲದೇ ಸದ್ಯ ಮಾಸ್ಕ್‌ ಹಾಕದೇ ಇರುವವರಿಗೆ ದಂಡ ಹಾಕುವುದಿಲ್ಲ, ಮುಂಬರುವ ದಿನಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ.

ಇನ್ನು ಎಲ್ಲರೂ ಸಾಮಜಿಕ ಅಂತರ ಕಾಪಾಡಬೇಕು. ಸೋಂಕು ಹೆಚ್ಚಿರುವ ದೇಶಗಳಿಂದ ಬಂದವರ ಮೇಲೆ ನಿಗಾ ವಹಿಸಬೇಕು ಏರ್‌ಪೋರ್ಟ್‌ನಲ್ಲಿ ಎಚ್ಚರ ವಹಿಸಿ, ನಾಲ್ವನೇ ಸೋಂಕು ಬರುವವರೆಗೆ ಕಾಯಬೇಡಿ, ಲಸಿಕೆ ಹಾಕಿಸಿಕೊಳ್ಳಿ ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಳಳ್ಳಿ ಎಂದು ತಿಳಿಸಿದ್ದಾರೆ.

ನೂತನ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಸೂಕ್ತವಲ್ಲವೆಂದು ಭಾವಿಸುತ್ತೇನೆ : ಸಿಎಂ ಬೊಮ್ಮಾಯಿಗೆ ಬಿಎಸ್ ಯಡಿಯೂರಪ್ಪ – Vishwanews24

Leave a Reply