1,441 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಿಂಪಡೆದ ಓಲಾ ಎಲೆಕ್ಟ್ರಿಕ್ ಕಂಪನಿ – Vishwanews24

Featured, ರಾಷ್ಟ್ರ ನ್ಯೂಸ್

ಸ್ಕೂಟರ್‌ಗಳ ಬ್ಯಾಟರಿ ಸ್ಪೋಟಗೊಂಡು ಜನರ ಜೀವಹಾನಿಯಾಗುತ್ತಿರುವ ಹಿನ್ನೆಲೆ..

1,441 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಿಂಪಡೆದ ಓಲಾ ಎಲೆಕ್ಟ್ರಿಕ್ ಕಂಪನಿ ..

ನವದೆಹಲಿ  : ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೆಂಕಿ ಹೊತ್ತಿಕೊಂಡು ಜೀವಹಾನಿ ಘಟನೆಗಳು ಪದೇಪದೇ ನಡೆಯುತ್ತಿರುವ ಹಿನ್ನೆಲೆಯಲ್ಲಿ ಓಲಾ ಎಲೆಕ್ಟ್ರಿಕ್ ತನ್ನ 1,441 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಹಿಂಪಡೆದುಕೊಂಡಿದೆ.

ದೇಶದ ಹಲವೆಡೆ ಇತ್ತೀಚಿನ ದಿನಗಳಲ್ಲಿ ಈ ಸ್ಕೂಟರ್‌ಗಳ ಬ್ಯಾಟರಿ ಸ್ಪೋಟಗೊಂಡು ಜನರ ಜೀವಹಾನಿಯಾಗುತ್ತಿರುವ ಅನೇಕ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕರಿಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದರು. ಅಲ್ಲದೇ ದೋಷಯುಕ್ತವಾಗಿರುವ ವಾಹನಗಳನ್ನು ಹಿಂಪಡೆಯುವಂತೆ ಸೂಚಿಸಿದ್ದರು. ದೇಶದಲ್ಲಿ ಈವರೆಗೆ ಮೂರು ಪ್ಯೂರ್ ಇವಿ, ಒಂದು ಓಲಾ, ಒಂದು ಬೂಮ್, ಎರಡು ಓಕಿನಾವಾ ಮತ್ತು 20 ಜಿತೇಂದ್ರ ಇವಿ ಸ್ಕೂಟರ್‌ಗಳಿಗೆ ಬೆಂಕಿ ಹೊತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಕಂಪೆನಿಗಳು ತಮ್ಮ ವಾಹನಗಳನ್ನು ಹಿಂತೆಗೆದುಕೊಳ್ಳುತ್ತಿವೆ. ಒಕಿನಾವಾ ಆಟೋಟೆಕ್ ಕೂಡಾ 3,000 ಯೂನಿಟ್‌, ಪ್ಯೂರ್‍ ಇವಿ ಸುಮಾರು 2,000 ಯುನಿಟ್‌ಗಳನ್ನು ಇತ್ತೀಚೆಗೆ ಹಿಂಪಡೆದುಕೊಂಡಿವೆ.

ರಾಜ್ಯದಲ್ಲಿ ಇನ್ಮುಂದೆ ಮಾಸ್ಕ್‌ ಕಡ್ಡಾಯ : ಸಿಎಂ ನೇತೃತ್ವದ ಸಭೆಯಲ್ಲಿ ತೀರ್ಮಾನ – Vishwanews24

1,441 ಸ್ಕೂಟರ್‌ಗಳ ಬ್ಯಾಚ್ ಹಿಂಪಡೆದ ಓಲಾ ಎಲೆಕ್ಟ್ರಿಕ್ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಮಾರ್ಚ್ 26 ರಂದು ಪುಣೆಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಹೀಗಾಗಿ ಓಲಾ ತನ್ನ 1,441 ಸ್ಕೂಟರ್‌ಗಳ ಬ್ಯಾಚ್ ಅನ್ನು ಹಿಂತೆಗೆದುಕೊಂಡಿದೆ. ತಪಾಸಣೆ ಸಲುವಾಗಿ ಸ್ವಯಂಪ್ರೇರಿತವಾಗಿ ಹಿಂತೆಗೆದುಕೊಳ್ಳಲಾಗಿದೆ ಎಂದು ಕಂಪೆನಿ ಹೇಳಿದೆ. ಬ್ಯಾಟರಿ ವ್ಯವಸ್ಥೆ ತಪಾಸಣೆ, ಥರ್ಮಲ್ ಸಿಸ್ಟಮ್, ಇತರ ಸುರಕ್ಷಿತಾ ವ್ಯವಸ್ಥೆಗಳನ್ನು ಕಂಪೆನಿ ಪರೀಕ್ಷಿಸಲಿದೆ.

ಅಲ್ಲದೆ ಪೊಲೀಸರು ಇವಿ ಸ್ಕೂಟರ್ ತಯಾರಕರ ವಿರುದ್ಧ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 174 ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಸ್ಕೂಟರ್‍ ಖರೀದಿಸಿದ ಒಂದು ದಿನದಲ್ಲೇ ಬ್ಯಾಟರಿ ಸ್ಪೋಟವಾಗಿರುವ ಪ್ರಕರಣಗಳೂ ದೇಶದಲ್ಲಿ ಘಟಿಸಿವೆ. ಇವಿ ಸ್ಕೂಟರ್‌ಗಳ ತಯಾರಕರಿಗೆ ‘ಗುಣಮಟ್ಟ-ಕೇಂದ್ರಿತ’ ಮಾರ್ಗಸೂಚಿಯನ್ನು ಪ್ರಕಟಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದನ್ನು ನಿರ್ಲಕ್ಷ್ಯ ಮಾಡಿದ್ದಲ್ಲಿ ಭಾರೀ ದಂಡ ಬೀಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಅಲ್ಲದೆ, ಇವುಗಳ ಸಮಸ್ಯೆ ಪರಿಶೀಲಿಸಲು ಮತ್ತು ಮಾರ್ಗಸೂಚಿಗಳಿಗೆ ಶಿಫಾರಸ್ಸು ಸಲ್ಲಿಸುವ ಸಲುವಾಗಿ ತಜ್ಞರ ಸಮಿತಿಯನ್ನೂ ಕೇಂದ್ರ ರಚಿಸಲಿದೆ.

ನೂತನ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಸೂಕ್ತವಲ್ಲವೆಂದು ಭಾವಿಸುತ್ತೇನೆ : ಸಿಎಂ ಬೊಮ್ಮಾಯಿಗೆ ಬಿಎಸ್ ಯಡಿಯೂರಪ್ಪ – Vishwanews24

Leave a Reply