ರಾಜ್ಯಾದ್ಯಂತ ಎಲ್ಲ ಮದುವೆ ನಡೆಯುವ ಕಡೆ ಓರ್ವ ಮಾರ್ಷಲ್ ಯೋಜನೆ: ಸುಧಾಕರ್ -Vishwanews24

Featured, ರಾಜ್ಯ ನ್ಯೂಸ್

ರಾಜ್ಯಾದ್ಯಂತ ಎಲ್ಲ ಮದುವೆ ನಡೆಯುವ ಕಡೆ ಓರ್ವ ಮಾರ್ಷಲ್ ಯೋಜನೆ: ಸುಧಾಕರ್ -Vishwanews24

ಬೆಂಗಳೂರು : ರಾಜ್ಯದಲ್ಲಿ ಸಭೆ, ಸಮಾರಂಭ, ಸಮಾವೇಶದಲ್ಲಿ ಹೆಚ್ಚಿನ ಜನರು ಸೇರುತ್ತಾ ಇದ್ದಾರೆ. ಹೀಗಾಗಿ ಮುಂಜಾಗ್ರತೆ ತೆಗೆದುಕೊಳ್ಳಲೇಬೇಕು. ಮಾರ್ಗಸೂಚಿಗೆ ವಿರುದ್ಧವಾಗಿ ನಡೆಯುತ್ತಿವೆ. ಮದುವೆ ಸಮಾರಂಭಗಳು ಹಾಗೆ ನಡೆಯುತ್ತಿವೆ. ಮಾಸ್ಕ್ ಹಾಕುವುದನ್ನೇ ಬಿಟ್ಟಿದ್ದಾರೆ. ಜನ, ವಿಐಪಿ, ವಿವಿಐಪಿಗಳು ಹಾಕ್ತಿಲ್ಲ. ಇದು ನಿಜಕ್ಕೂ ಅಪಾಯಕಾರಿ. ಹೀಗಾಗಿ ಮದುವೆ ಸಮಾರಂಭಕ್ಕೆ ಮಾರ್ಷಲ್ ಹಾಕ್ತೇವೆ. ಇಂದು ಅಧಿಕೃತ ಸುತ್ತೋಲೆ ಹೊರಡಿಸ್ತೇವೆ. ಫುಡ್ ಮಾಡುವವರು, ಹಂಚುವವರ ಮೇಲೆ ನಿಗಾ ವಹಿಸಲಾಗುತ್ತದೆ. ಇವರೆಲ್ಲರಿಗೆ ಕೊರೋನಾ ಟೆಸ್ಟ್ ಕಡ್ಡಾಯ ಮಾಡ್ತೇವೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಉಡುಪಿ: ನಗರದಲ್ಲಿಅಕ್ರಮ ಕಟ್ಟಡ : ತಕ್ಷಣ ಕಟ್ಟಡದ ಟ್ರೇಡ್ ಲೈಸನ್ಸ್ ರದ್ದು ಮಾಡಿ ,ಕಟ್ಟಡ ತೆರವು‌ ಮಾಡಲು ಕ್ರಮ ಕೈಗೊಳ್ಳಬೇಕು : ಮಹಮ್ಮದ್ ಹನೀಫ್ -Vishwanews24

ಈ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಡಿಸಿ, ಎಸ್ಪಿ, ಸಿಇಒ, ಆರೋಗ್ಯಾಧಿಕಾರಿಗಳ ಜೊತೆಗೆ ವಿಡಿಯೋ ಸಂವಾದವನ್ನ ಮಾಡಿದ್ದೇವೆ. ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾಗ್ತಿದೆ. ಹೀಗಾಗಿ ಗಡಿಯಲ್ಲಿ ಮತ್ತಷ್ಟು ನಿಗಾವಹಿಸಿದ್ದೇವೆ. ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆಯೇ.? ಯಾವ ರೀತಿ ಟೆಸ್ಟ್ ನಡೆದಿದೆ, ಪ್ರಮಾಣ ಇದರ ಚರ್ಚೆಯಾಗಿದೆ ಎಂದರು.

ಉಡುಪಿ: ಸ್ಥಳೀಯರಿಗೆ ಶುಲ್ಕ ವಿನಾಯತಿಗೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿಯ ವತಿಯಿಂದ ಸಾಸ್ತಾನ ಟೋಲ್ ನಲ್ಲಿ ಬೃಹತ್ ಪ್ರತಿಭಟನೆ -Vishwanews24

ರಾಜ್ಯದಲ್ಲಿ 2 ಲಕ್ಷ 90 ಸಾವಿರ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗಿದೆ. ಕಂದಾಯ, ಗ್ರಾಮೀಣಾಭಿವೃದ್ಧಿ, ಗೃಹ, ನಗರಾಭಿವೃದ್ಧಿ ಇಲಾಖೆ ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ 4 ಲಕ್ಷದ 22 ಸಾವಿರಜನರಿಗೆ ಕೊಟ್ಟಿದ್ದೇವೆ. ಮೊದಲ ಹಂತದ ಡೋಸ್ ಕೊಟ್ಟಿದ್ದೇವೆ. ನಾವು 8 ಲಕ್ಷ ಗುರಿಯನ್ನ ಇಟ್ಟುಕೊಂಡಿದ್ದೆವು. ಇದೇ 28 ರೊಳಗೆ ಗುರಿ ತಲುಪುವಂತೆ ಸೂಚನೆಯನ್ನು ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಕೊಟ್ಟಿದ್ದೇವೆ. ಲಸಿಕೆಯನ್ನ ಕೊಡುವ ಗುರಿ ಮುಟ್ಟುವಂತೆ ತಿಳಿಸಿದ್ದೇವೆ. ನಾಳೆ, ನಾಡಿದ್ದು ಫ್ರಂಟ್ ಲೈನ್ ವರ್ಕರ್ಸ್ ಪಡೆದುಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಸಭೆ, ಸಮಾರಂಭ, ಸಮಾವೇಶದಲ್ಲಿ ಹೆಚ್ಚಿನ ಜನ ಸೇರುತ್ತಿದ್ದಾರೆ. ಹೀಗಾಗಿ ಮುಂಜಾಗ್ರತೆ ತೆಗೆದುಕೊಳ್ಳಲೇಬೇಕು. ಮಾರ್ಗಸೂಚಿಗೆ ವಿರುದ್ಧವಾಗಿ ನಡೆಯುತ್ತಿವೆ. ಮದುವೆ ಸಮಾರಂಭಗಳು ಹಾಗೆ ನಡೆಯುತ್ತಿವೆ. ಮಾಸ್ಕ್ ಹಾಕುವುದನ್ನೇ ಬಿಟ್ಟಿದ್ದಾರೆ. ಜನ, ವಿಐಪಿ, ವಿವಿಐಪಿಗಳು ಹಾಕ್ತಿಲ್ಲ. ಇದು ನಿಜಕ್ಕೂ ಅಪಾಯಕಾರಿ. ಹೀಗಾಗಿ ಮದುವೆ ಸಮಾರಂಭಕ್ಕೆ ಮಾರ್ಷಲ್ ಹಾಕ್ತೇವೆ. ಇಂದು ಅಧಿಕೃತ ಸುತ್ತೋಲೆ ಹೊರಡಿಸ್ತೇವೆ ಎಂದು ತಿಳಿಸಿದರು.

ಕುಂದಾಪುರ : ಹಿಂದೂ ಸಾಮ್ರಾಜ್ಯವನ್ನು ನಿರ್ಮಿಸಲು ಶಿವಾಜಿಯ ಹೋರಾಟ, ತ್ಯಾಗ, ಕಠಿಣ ಪರಿಶ್ರಮ ಮತ್ತು ಸಮರ್ಪಣೆ ನಮ್ಮೆಲ್ಲರಿಗೂ ಮಾದರಿ : ಬಸ್ರೂರಿನಲ್ಲಿ ಚಕ್ರವರ್ತಿ ಸೂಲಿಬೆಲೆ -Vishwanews24