ಉಡುಪಿ: ಸ್ಥಳೀಯರಿಗೆ ಶುಲ್ಕ ವಿನಾಯತಿಗೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿಯ ವತಿಯಿಂದ ಸಾಸ್ತಾನ ಟೋಲ್ ನಲ್ಲಿ ಬೃಹತ್ ಪ್ರತಿಭಟನೆ  -Vishwanews24

Featured, ಉಡುಪಿ

ಉಡುಪಿ: ಸ್ಥಳೀಯರಿಗೆ ಶುಲ್ಕ ವಿನಾಯತಿಗೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿಯ ವತಿಯಿಂದ ಸಾಸ್ತಾನ ಟೋಲ್ ನಲ್ಲಿ ಬೃಹತ್ ಪ್ರತಿಭಟನೆ  -Vishwanews24

ಉಡುಪಿ: ಸ್ಥಳೀಯರಿಗೆ ಟೋಲ್ ವಿನಾಯತಿಗೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿರುವ ಪ್ರತಿಭಟನೆ ಸಾಸ್ತಾನ ಟೋಲ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯರ ಹಾಜರಾತಿಯೊಂದಿಗೆ ಆರಂಭವಾಗಿದೆ.

ಪ್ರತಿಭಟನಾ ಸಭೆಗೆ ಆಗಮಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸ್ಥಳೀಯರಿಗೆ ಟೋಲ್ ನಲ್ಲಿ ರಿಯಾಯತಿ ನೀಡುವ ನಿಟ್ಟಿನಲ್ಲಿ ಸಂಸದರ ನೇತೃತ್ವದಲ್ಲಿ ದಿಶಾ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹಾಗೂ ಸ್ಥಳೀಯರ ಪರವಾಗಿ ಸದಾ ಇರುವುದಾಗಿ ಹೇಳಿದರು.

ಬಹುಮತ ಸಾಬೀತುಪಡಿಸುವಲ್ಲಿ ವಿಫಲ : ಪುದುಚೇರಿ ಕಾಂಗ್ರೆಸ್ ಸರ್ಕಾರ ಪತನ ; ಸಿಎಂ ರಾಜೀನಾಮೆ -Vishwanews24

ಪ್ರತಿಭಟನೆಯಲ್ಲಿ ವಿವಿಧ ಧಾರ್ಮಿಕ ನಾಯಕರು ರಾಜಕೀಯ ಮುಖಂಡರು ಭಾಗಹವಹಿಸಿದ್ದಾರೆ.

ಬ್ರಹ್ಮಾವರ ತಾಲೂಕು ಪಂಚಾಯತಿ ಅಧ್ಯಕ್ಷರಾದ ಜ್ಯೋತಿ ಉದಯ್ ಕುಮಾರ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಮಾಜಿ ಜಿಪಂ ಅಧ್ಯಕ್ಷ ಕೇಶವ ಕುಂದರ್, ಸಾಸ್ತಾನ ಸಂತ ಅಂತೋನಿ ದೇವಾಲಯದ ಧರ್ಮಗುರುಗಳಾದ ವಂ ಜೋನ್ ವಾಲ್ಟರ್ ಮೆಂಡೋನ್ಸಾ, ಸ್ಥಳೀಯ ಜುಮ್ಮಾ ಮಸೀದಿಯ ಧರ್ಮಗುರುಗಳಾದ ರಿಜ್ವಾನ್, ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಲ್ಪನಾ ದಿನಕರ್, ಉಪಾಧ್ಯಕ್ಷರಾದ ಸಿಲ್ವೆಸ್ಟರ್ ಡಿಸೋಜಾ, ಜಯ ಕರ್ನಾಟಕ ಸಂಘಟನೆಯ ಸತೀಶ್ ಪೂಜಾರಿ, ಮಾಜಿ ತಾಪಂ ಸದಸ್ಯರಾದ ರಾಜರಾಮ್, ಹೆದ್ದಾರಿ ಜಾಗೃತಿ ಸಮಿತಿಯ ಶ್ಯಾಮ್ ಸುಂದರ್ ನಾಯರಿ, ಆಲ್ವಿನ್ ಅಂದ್ರಾದೆ, ಪ್ರತಾಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ವಿಠಲ್ ಪೂಜಾರಿ, ಭೋಜ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.

ಮೂಡುಬಿದಿರೆ : ನಾನು ಮತ್ತು ಅಭಯಚಂದ್ರ ಜೈನ್‌ ಕೋಟಿ- ಚೆನ್ನಯರಾಗಿ ಕೆಲಸ ಮಾಡುತ್ತೇವೆ , ರಾಜಕೀಯ ಏನಿದ್ದರೂ ಎಲೆಕ್ಷನ್ ಸಮಯದಲ್ಲಿ ಮಾತ್ರ : ಉಮಾನಾಥ್ ಕೋಟ್ಯಾನ್ -Vishwanews24