ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ: ಬೆಳ್ಳೆ ಗ್ರಾ.ಪಂ.ಗೆ ಕೇಂದ್ರ ತಂಡ ಭೇಟಿ -vishwanews24
ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ: ಬೆಳ್ಳೆ ಗ್ರಾ.ಪಂ.ಗೆ ಕೇಂದ್ರ ತಂಡ ಭೇಟಿ
ಶಿರ್ವ : ಆತ್ಮ ನಿರ್ಭರ ಭಾರತ ರಾಷ್ಟ್ರೀಯ ಪ್ರಶಸ್ತಿಗೆ ಇಡೀ ರಾಜ್ಯದಿಂದ ರಾಷ್ಟ್ರದ ಇತರ ಐದು ಪಂಚಾಯತ್ಗಳೊಂದಿಗೆ ನಾಮ ನಿರ್ದೇಶನಗೊಂಡ ಬೆಳ್ಳೆ ಗ್ರಾಮ ಪಂಚಾಯತ್ಗೆ ಕೇಂದ್ರ ಸರಕಾರದ ತಂಡ ಭೇಟಿ ನೀಡಿದೆ.
ಬೆಳ್ಳೆ ಗ್ರಾಮ ಪಂಚಾಯತ್ 2024-25ನೇ ಸಾಲಿನಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಸ್ವಂತ ಸಂಪನ್ಮೂಲವನ್ನು ಉತ್ತಮ ರೀತಿಯಲ್ಲಿ ಸಂಗ್ರಹಿಸಿ ಬಳಕೆ ಮಾಡಿರುವ ಬಗ್ಗೆ ಧನಂಜಯ್ ಚಾವ್ಲಾ ಮತ್ತು ಉಪೇಂದ್ರ ನೇತೃತ್ವದ ಕೇಂದ್ರ ಸರಕಾರದ ತಂಡ ಭೇಟಿ ನೀಡಿ ಪರಿಶೀಲಿಸಿತು.
ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಸಿಪಿಒ ಉದಯಕುಮಾರ್ ಶೆಟ್ಟಿ, ಕಾಪು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿ,ಸಿಲ್ವ, ಅನಿಲ್ ಶೆಟ್ಟಿ, ತಾಪಂ ಅಧಿಕಾರಿ ಗಳಾದ ರಜನಿ, ಚಂದ್ರಕಲಾ, ಪಿಡಿಒ ಆಶಾಲತಾ, ರಾಜೇಶ್ ಶೆಣೈ, ತಿಲಕ್ ರಾಜ್, ಶಶಿಧರ ಆಚಾರ್ಯ, ಮಹೇಶ್ ಶಂಕರ್, ಗ್ರಾಪಂ ಆಡಳಿತಾಧಿಕಾರಿ ನಿಧೀಶ್ ಹೊಳ್ಳ, ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ದಿವ್ಯಾ ಆಚಾರ್ಯ, ಮಾಜಿ ಉಪಾಧ್ಯಕ್ಷ ಶಶಿಧರ ವಾಗ್ಲೆ, ಉಡುಪಿ ತಾಪಂ ಮಾಜಿ ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಗ್ರಾಪಂ ಮಾಜಿ ಸದಸ್ಯರು, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿ ಗಳು, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂಧಿವರ್ಗ, ಗ್ರಂಥಾಲಯ ಮತ್ತು ಎಸ್ಎಲ್ಆರ್ಎಂ ಸಿಬ್ಬಂದಿ, ಸಂಜೀನಿ ಒಕ್ಕೂಟದ ಪ್ರಮುಖರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
