ರೈತ ವಿರೋಧಿ ಬಿಜೆಪಿ ಸರಕಾರವನ್ನು ಆದಷ್ಟು ಬೇಗ ಕಿತ್ತು ಹಾಕುವುದೇ ನಮ್ಮ ಗುರಿ : ರೈತ ಮುಖಂಡ ಬಾಬಾಗೌಡ ಪಾಟೀಲ್ -Vishwanews24
ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಲಾರೆ..
ರೈತ ವಿರೋಧಿ ಬಿಜೆಪಿ ಸರಕಾರವನ್ನು ಆದಷ್ಟು ಬೇಗ ಕಿತ್ತು ಹಾಕುವುದೇ ನಮ್ಮ ಗುರಿ : ರೈತ ಮುಖಂಡ ಬಾಬಾಗೌಡ ಪಾಟೀಲ್ -Vishwanews24
ಬೆಳಗಾವಿ: ರೈತ ವಿರೋಧಿ ಬಿಜೆಪಿಯನ್ನ ಕಿತ್ತೆಸೆಯುವುದೇ ನನ್ನ ಗುರಿ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರೈತ ಮುಖಂಡ ಬಾಬಾಗೌಡ ಪಾಟೀಲ್ ಹೇಳಿದ್ದಾರೆ.
ಬೆಳಗಾವಿಯ ಚಿಕ್ಕಬಾಗೇವಾಡಿಯಲ್ಲಿರುವ ಬಾಬಾಗೌಡ ಪಾಟೀಲ್ ನಿವಾಸಕ್ಕೆ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗು ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚೀನ್ ಮಿಗಾ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಎಚ್. ಮುನಿಯಪ್ಪ ಅವರು ಭೇಟಿಯಾಗಿ ಈ ಬಾರಿ ಬೆಳಗಾವಿಯಲ್ಲಿ ನಡೆಯುತ್ತಿರುವ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ಬೆಂಬಲಸುವಂತೆ ಮನವಿ ಮಾಡಿದರು.
ರೈತರನ್ನೇ ದಾರಿ ತಪ್ಪಿಸಿದವರು, KSRTC ನೌಕರರನ್ನ ಬಿಡುತ್ತಾರಾ : ಪ್ರತಾಪ್ ಸಿಂಹ -Vishwanews24
ಬಾಬಾಗೌಡ ಪಾಟೀಲ್ ಮಾತನಾಡಿ ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಲಾರೆ, ಬಿಜೆಪಿ ಸರಕಾರವನ್ನು ಆದಷ್ಟು ಬೇಗ ಕಿತ್ತು ಹಾಕುವುದೇ ನಮ್ಮ ಗುರಿ ಎಂದು ಹೇಳಿದರು. ಆದರೆ ಕಾಂಗ್ರೆಸ್ ಪರ ಪ್ರಚಾರ ಮಾಡುವ ಬಗ್ಗೆ ಅವರು ತಮ್ಮ ಸಹಚರರು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ನಿರ್ಧಾರ ಮಾಡುವುದಾಗಿ ತಿಳಿಸಿದರು.
ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸೇರಿದಂತೆ ಎಲ್ಲ ನಾಯಕರ ಸೂಚಿನೆಯಂತೆ ಬಾಬಾಗೌಡ ಪಾಟೀಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡಸಿ ನಮ್ಮ ಪಕ್ಷಕ್ಕೆ ಬೆಂಬಲ ಕೇಳಿದ್ದೇವೆ ಅವರು ಬಿಜೆಪಿ ಮತ ಹಾಕುವುದಿಲ್ಲವೆಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಚಿಕ್ಕಬಾಗೇಬಾಡಿ ಗ್ರಾಮದ ಹಲವು ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮಂಗಳೂರು : ಕರಾವಳಿಯಲ್ಲಿ ಪ್ರಯಾಣಿಕರಿಗೆ ತಟ್ಟದ ಮುಷ್ಕರ ಬಿಸಿ , 20ಕ್ಕೂ ಅಧಿಕ KSRTC ಬಸ್ ಓಡಾಟ -Vishwanews24
