ಲವ್ ಜಿಹಾದ್ ಬದಲು, ಲವ್ ಕೇಸರಿ ಮಾಡಿ : ಶ್ರೀರಾಮಸೇನೆ ನಾಯಕನಿಂದ ಕರೆ – Vishwanews24

Featured, ರಾಜ್ಯ ನ್ಯೂಸ್

ಲವ್ ಜಿಹಾದ್ ಬದಲು, ಲವ್ ಕೇಸರಿ ಮಾಡಿ : ಶ್ರೀರಾಮಸೇನೆ ನಾಯಕನಿಂದ ಕರೆ – Vishwanews24

ರಾಯಚೂರು: ಲವ್ ಜಿಹಾದ್ ಗೆ ವಿರುದ್ದವಾಗಿ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ನಾಯಕನಿಂದ ಕರೆ ನೀಡಲಾಗಿದೆ. ಈ ಬಗ್ಗೆ ರಾಯಚೂರು ನಗರದಲ್ಲಿ ನಡೆದಿದ್ದ ಕಾರ್ಯಕ್ರಮದ ವೇಳೆ ಶ್ರೀರಾಮಸೇನೆ ರಾಯಚೂರು ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ `ಲವ್ ಜಿಹಾದ್ ಬದಲು, ಲವ್ ಕೇಸರಿ ಮಾಡಿ’ ಎಂದು ಕರೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶ್ರೀರಾಮಸೇನೆ ರಾಯಚೂರು ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ  ಶ್ರೀರಾಮಸೇನೆಯ ಸಂಚಾಲಕ ರಾಜಾಚಂದ್ರ ರಾಮನಗೌಡ ಲವ್ ಕೇಸರಿ ಟ್ರೆಂಡ್​ಗೆ ಕರೆ ಕೊಟ್ಟಿದ್ದಾರೆ. ಲವ್ ಜಿಹಾದ್ ಮಾಡುವವರನ್ನ ಸುಮ್ಮನೇ ಬಿಡೋದು ಬೇಡ . ಹಿಂದೂ ಹೆಣ್ಣು ಮಕ್ಕಳಿಗೆ ತೊಂದರೆ ಕೊಟ್ಟವರನ್ನು ಸುಮ್ಮನೆ ಬಿಡಬೇಡಿ.

ನಮ್ಮವರ ಮೇಲೆ ಅವರು ದಾಳಿ ಮಾಡ್ತಾರೆ, ನಾವೂ ಅದೇ ಮಾಡೋಣ. ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಮುಖಂಡರು ಕಾರ್ಯಕರ್ತರಿಗೆ ತಲ್ವಾರ್​​​​​ ನೀಡಿದ್ದಾರೆ.

ಉಚ್ಚಿಲ : ಮಹಾಲಕ್ಷ್ಮೀ ಕ್ಷೇತ್ರಕ್ಕೆ 5 ಕೋಟಿ ರೂಪಾಯಿ ನೆರವು : ಸಿಎಂ ಘೋಷಣೆ – Vishwanews24

Leave a Reply