ಲವ್ ಜಿಹಾದ್ ಬದಲು, ಲವ್ ಕೇಸರಿ ಮಾಡಿ : ಶ್ರೀರಾಮಸೇನೆ ನಾಯಕನಿಂದ ಕರೆ – Vishwanews24
ಲವ್ ಜಿಹಾದ್ ಬದಲು, ಲವ್ ಕೇಸರಿ ಮಾಡಿ : ಶ್ರೀರಾಮಸೇನೆ ನಾಯಕನಿಂದ ಕರೆ – Vishwanews24
ರಾಯಚೂರು: ಲವ್ ಜಿಹಾದ್ ಗೆ ವಿರುದ್ದವಾಗಿ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ನಾಯಕನಿಂದ ಕರೆ ನೀಡಲಾಗಿದೆ. ಈ ಬಗ್ಗೆ ರಾಯಚೂರು ನಗರದಲ್ಲಿ ನಡೆದಿದ್ದ ಕಾರ್ಯಕ್ರಮದ ವೇಳೆ ಶ್ರೀರಾಮಸೇನೆ ರಾಯಚೂರು ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ `ಲವ್ ಜಿಹಾದ್ ಬದಲು, ಲವ್ ಕೇಸರಿ ಮಾಡಿ’ ಎಂದು ಕರೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶ್ರೀರಾಮಸೇನೆ ರಾಯಚೂರು ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ ಶ್ರೀರಾಮಸೇನೆಯ ಸಂಚಾಲಕ ರಾಜಾಚಂದ್ರ ರಾಮನಗೌಡ ಲವ್ ಕೇಸರಿ ಟ್ರೆಂಡ್ಗೆ ಕರೆ ಕೊಟ್ಟಿದ್ದಾರೆ. ಲವ್ ಜಿಹಾದ್ ಮಾಡುವವರನ್ನ ಸುಮ್ಮನೇ ಬಿಡೋದು ಬೇಡ . ಹಿಂದೂ ಹೆಣ್ಣು ಮಕ್ಕಳಿಗೆ ತೊಂದರೆ ಕೊಟ್ಟವರನ್ನು ಸುಮ್ಮನೆ ಬಿಡಬೇಡಿ.
ನಮ್ಮವರ ಮೇಲೆ ಅವರು ದಾಳಿ ಮಾಡ್ತಾರೆ, ನಾವೂ ಅದೇ ಮಾಡೋಣ. ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಮುಖಂಡರು ಕಾರ್ಯಕರ್ತರಿಗೆ ತಲ್ವಾರ್ ನೀಡಿದ್ದಾರೆ.
ಉಚ್ಚಿಲ : ಮಹಾಲಕ್ಷ್ಮೀ ಕ್ಷೇತ್ರಕ್ಕೆ 5 ಕೋಟಿ ರೂಪಾಯಿ ನೆರವು : ಸಿಎಂ ಘೋಷಣೆ – Vishwanews24
