ವರ್ಷದ ನಂತರ ಭಕ್ತರಿಗೆ ದರ್ಶನ ಕರುಣಿಸಿದ ಹಾಸನಾಂಬೆ – vishwanews24

Featured, ರಾಜ್ಯ ನ್ಯೂಸ್

ವರ್ಷದ ನಂತರ ಭಕ್ತರಿಗೆ ದರ್ಶನ ಕರುಣಿಸಿದ ಹಾಸನಾಂಬೆ : ಜಯಘೋಷದ ನಡುವೆ ತೆರೆದ ಗರ್ಭಗುಡಿ ಬಾಗಿಲು

ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಗುರುವಾರ ಮಧ್ಯಾಹ್ನ 12:28ಕ್ಕೆ ಶಾಸ್ರೋಕ್ತವಾಗಿ ತೆರೆಯಲಾಯಿತು.

‘ಹಾಸನಾಂಬೆಗೆ ಜೈ.. ತಾಯಿಗೆ ಉಘ ಉಘ.. ಎಂಬ ಭಕ್ತರ ಭಕ್ತಿಪೂರ್ವಕ ಜಯಘೋಷಗಳ ನಡುವೆ ದೇವಿಯ ದರ್ಶನೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.

ನ.1ರಿಂದ 30ರವರೆಗೆ ಬಿಜೆಪಿಯಿಂದ ರಾಜ್ಯಾದ್ಯಂತ ‘ಅರಾಜಕತೆ ಹಟಾವೋ’ ಅಭಿಯಾನ – vishwanews24

ಅರಸು ವಂಶಸ್ಥರಿಂದ ಸಾಂಪ್ರದಾಯಿಕ ಪೂಜೆ ನೆರವೇರಿತು. ಪೂರ್ವ ಸಂಪ್ರದಾಯದಂತೆ ತಳವಾರ ವಂಶಸ್ಥರಾದ ನಂಜರಾಜು ಅವರು ವಿಶೇಷ ಪೂಜೆ ಸಲ್ಲಿಸಿ, ವಂಶಪಾರಂಪರ್ಯವಾಗಿ ಬಂದಿರುವ ಪವಿತ್ರ ಖಡ್ಗದಿಂದ ಗೊನೆಕಟ್ಟಿದ್ದ ಬಾಳೆ ಕಂಬವನ್ನು ಕಡಿಯುವ ಮೂಲಕ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ಬಾಳೆ ಕಂಬ ಕಡಿಯುತ್ತಿದ್ದಂತೆಯೇ ಗರ್ಭಗುಡಿಯ ಬಾಗಿಲನ್ನು ತೆರೆಯಲಾಯಿತು. ಬಾಗಿಲು ತೆರೆದ ಮೊದಲ ದಿನದಂದು ಯಾವುದೇ ಆಭರಣ ಹಾಗೂ ವಸ್ತ್ರಾಲಂಕಾರಗಳೆಲ್ಲದ ದೇವಿಯ ‘ವಿಶ್ವರೂಪ ದರ್ಶನ’ ಪಡೆದ ಮಠಾಧೀಶರು, ಗಣ್ಯರು ಹಾಗೂ ಜನಪ್ರತಿನಿಧಿಗಳು ಪುನೀತಭಾವ ಅನುಭವಿಸಿದರು.

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ ; ಇಬ್ಬರ ಬಂಧನ – vishwanews24

 

Leave a Reply