ವಿಶ್ವನ್ಯೂಸ್24 ನ 2020 ರ ಸಾಲಿನ ವಿಶ್ವಶ್ರೀ ಪುರಸ್ಕಾರ-2020 ಪ್ರಶಸ್ತಿ ಪ್ರದಾನ – Vishwanews24
ವಿಶ್ವನ್ಯೂಸ್24 ನ 2020 ರ ಸಾಲಿನ ವಿಶ್ವಶ್ರೀ ಪುರಸ್ಕಾರ-2020 ಪ್ರಶಸ್ತಿ ಪ್ರದಾನ. .Vishwanews24

ಕಾಪು: ಮಮಂತ್ರ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್. ನ ಅಂಗಸಂಸ್ಥೆಯಾದ ವಿಶ್ವನ್ಯೂಸ್24 ವತಿಯಿಂದ ಧಾರ್ಮಿಕ -ಸಾಮಾಜಿಕ-ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರಿಗೆ ಕೊಡಲ್ಪಡುವ 2020 ಸಾಲಿನ “ವಿಶ್ವಶ್ರೀ ಪುರಸ್ಕಾರ” ಕ್ಕೆ ಧಾರ್ಮಿಕ ಕ್ಷೇತ್ರದಲ್ಲಿ ಕಾಪು ಕೊಂಕಣಿ ಮಠ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಕಾಪು ಹಳೆ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಮಾಡುತ್ತಿರುವ ಕಾಪು ಕಮಲಾಕ್ಷ ಭಟ್ ಅವರಿಗೆ ಪ್ರದಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಮ್.ಸುವರ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ಬಾಲಾಜಿ,ಕೆಪಿಸಿಸಿ ರಾಜ್ಯಸಂಯೋಜಕ ಫಾರೂಕ್ ಚಂದ್ರನಗರ,ಸಮಾಜಸೇವಕ ಕಾಪು ಲೀಲಾಧರ್ ಶೆಟ್ಟಿ, ದಿವಾಕರ್ ಡಿ ಶೆಟ್ಟಿ,ದಯಾನಂದ ಶೆಟ್ಟಿ ,ಮಮಂತ್ರ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಪುರುಷೋತ್ತಮ ಸಾಲಿಯಾನ್,ನಿರ್ದೇಶಕರಾದ ಪ್ರಶಾಂತ್ ಕುಮಾರ್,ಕಿಶೋರ್ ಉದೇರಿ,ಪರೀಕ್ಷಿತ್ ಗಾಣಿಗ ಉಪಸ್ಥಿತರಿದ್ದರು.
