ಗುರುವಾರ ಭಗವಾನ್‌ ವಿಷ್ಣುವನ್ನು ಆರಾಧಿಸಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ಕಂಡುಕೊಳ್ಳಿ. -Vishwanews24

Featured, ರಾಜ್ಯ ನ್ಯೂಸ್

ಗುರುವಾರ ಭಗವಾನ್‌ ವಿಷ್ಣುವನ್ನು ಆರಾಧಿಸಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ಕಂಡುಕೊಳ್ಳಿ. -Vishwanews24

ಇಂದು ಗುರುವಾರದ ಶುಭದಿನ. ಗುರುವಾರವು ಭಗವಾನ್‌ ವಿಷ್ಣು ದೇವರಿಗೆ ಅರ್ಪಿತವಾದ ದಿನವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಭಗವಾನ್‌ ವಿಷ್ಣುವನ್ನು ತ್ರಿದೇವ ಎಂದು ಕರೆಯುತ್ತಾರೆ. ಗುರುವಾರವನ್ನು ಬೃಹಸ್ಪತಿವಾರವೆಂದು ಕರೆಯಲಾಗಿದ್ದು, ಇದನ್ನು ಭಗವಾನ್‌ ವಿಷ್ಣು ಇಲ್ಲವೇ ಭಗವಾನ್‌ ಬೃಹಸ್ಪತಿಗೆ ಮೀಸಲಾಗಿದೆ.  ಗುರುವಾರ ಮತ್ತು ಶುಕ್ರವಾರದಂದು ಭಗವಾನ್‌ ವಿಷ್ಣು ಮತ್ತು ಆತನ ಪತ್ನಿ ಲಕ್ಷ್ಮಿ ದೇವಿಯನ್ನು ಜೊತೆಯಾಗಿ ಪೂಜಿಸಿದರೆ ಧನ, ಸಂಪತ್ತು, ಸಂತೋಷ, ಶಾಂತಿ ಹಾಗೂ ಜ್ಞಾನ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ.

ಭಗವಾನ್‌ ವಿಷ್ಣುವಿಗೆ ಹಳದಿ ಬಣ್ಣವೆಂದರೆ ಬಲು ಪ್ರೀತಿ. ಅಷ್ಟು ಮಾತ್ರವಲ್ಲ, ವಿಷ್ಣು ದೇವರನ್ನು ಮೆಚ್ಚಿಸುವುದು ಕೂಡ ತುಂಬಾ ಸುಲಭ. ಗುರುವಾರದಂದು ನಾವು ವಿಷ್ಣುವನ್ನು ಹೇಗೆ ಪೂಜಿಸಬೇಕು ನೋಡಿ:

1) ಗುರುವಾರದಂದು ವಿಷ್ಣು ಭಕ್ತರು ಅಥವಾ ವಿಷ್ಣುವನ್ನು ಆರಾದಿಸುವವರು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುಚಿಯಾಗಿ ವಿಷ್ಣುವಿಗೆ ಪ್ರಿಯವಾದ ಹಳದಿ ಬಟ್ಟೆಯನ್ನು ಧರಿಸಬೇಕು. ವಿಷ್ಣುವಿನ ಪೂಜೆಯಲ್ಲಿ ಮಾತ್ರವಲ್ಲ, ಹಿಂದೂ ಧರ್ಮದಲ್ಲಿ ಅರಶಿಣಕ್ಕೆ ಅದರದ್ದೇ ಮಹತ್ವವಿದೆ.

2) ನಂತರ ವಿಷ್ಣುವಿನ ವಿಗ್ರಹವನ್ನು ಹಾಗೂ ಲಕ್ಷ್ಮಿ ವಿಗ್ರಹವನ್ನು ಶುಚಿಗೊಳಿಸಿ. ಪೂಜೆಯಲ್ಲಿ ವಿಷ್ಣುವಿಗೆ ಹೆಚ್ಚು ಅರಶಿಣ ಬಣ್ಣದ ಹೂವುಗಳನ್ನು, ಅರಶಿಣ ಬಣ್ಣದ ವಸ್ತುಗಳನ್ನು ಅರ್ಪಿಸಿ. ವಿಷ್ಣುವಿನೊಂದಿಗೆ ಲಕ್ಷ್ಮಿ ದೇವಿಯನ್ನು ಆರಾಧಿಸಿ. ಈ ದಿನ ವ್ರತವನ್ನು ಕೈಗೊಳ್ಳುವವರು ತುಪ್ಪದಿಂದ ತಯಾರಿಸಿದ ಆಹಾರವನ್ನು ಸೇವಿಸಿ.

3) ಇಂದು ವಿಷ್ಣುವಿಗೆ ಹಳದಿ ಬಣ್ಣದ ಬೇಳೆ ಕಾಳುಗಳನ್ನು ಹಾಗೂ ಬೆಲ್ಲವನ್ನು ಅರ್ಪಿಸಬೇಕು.

4) ಗುರುವಾರ ಬಾಳೆ ಗಿಡವನ್ನು ಪೂಜಿಸಬೇಕು. ಬಾಳೆಹಣ್ಣನ್ನು ವಿಷ್ಣುವಿಗೆ ಅರ್ಪಿಸಬೇಕು. ಹಾಗೂ ಬಾಳೆಗಿಡವನ್ನು ವಿಷ್ಣುವಿನ ಪೂಜೆಯಲ್ಲಿ ಬಳಸಬೇಕು.

5) ಗುರುವಾರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿದರೆ ಉತ್ತಮ ಅಥವಾ ಗುರುವಾರದಂದು ವಿಷ್ಣುವಿನ ಪೂಜೆಯಲ್ಲಿ ಸತ್ಯನಾರಾಯಣ ಕಥೆಯನ್ನು ಪಾರಾಯಣ ಮಾಡಬಹುದು.

6) ವಿಷ್ಣುವನ್ನು ಪೂಜಿಸುವಾಗ ಓಂ ಜೈ ಜಗದೀಶ ಹರೇ ಎನ್ನುವ ವಿಷ್ಣುವಿನ ಪವಿತ್ರ ಮಂತ್ರವನ್ನು ಪಠಿಸಬೇಕು. ಕೊನೆಯದಾಗಿ ವಿಷ್ಣುವಿಗೆ ಆರತಿ ಬೆಳಗಿ. ವಿಷ್ಣುವಿಗೆ ಅರ್ಪಿಸಿದ ಬೇಳೆ ಕಾಳುಗಳನ್ನು, ಬೆಲ್ಲವನ್ನು ಹಾಗೂ ಬಾಳೆಹಣ್ಣನ್ನು ಪ್ರಸಾದವಾಗಿ ಸ್ವೀಕರಿಸಬಹುದು. ಗುರುವಾರ ಮಾಡುವ ದಾನಕ್ಕೆ ವಿಶೇಷ ಮಹತ್ವವಿದೆ. ಆದ್ದರಿಂದ ಇಂದು ಅಸಾಹಯಕರಿಗೆ, ಬಡವರಿಗೆ ಆಹಾರ, ಹಣ ಅಥವಾ ಬಟ್ಟೆಯನ್ನು ದಾನ ಮಾಡಿ.

ಗುರುವಾರದಂದು ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ನೋಡಿ:

ಧರ್ಮಗ್ರಂಥಗಳಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಬೃಹಸ್ಪತಿ ಗ್ರಹದ ಅನುಕೂಲವನ್ನು ಪಡೆಯಲು ಗುರುವಾರದಂದು ಕೆಲವೊಂದು ಕೆಲಸಗಳನ್ನು ಮಾಡಬಾರದೆಂದು ಹೇಳಲಾಗಿದೆ. ಈ ಕೆಳಗಿನ ಕೆಲಸಗಳನ್ನು ಗುರುವಾರ ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಮತ್ತು ಧರ್ಮಗ್ರಂಥ ಹೇಳುತ್ತದೆ. ಅವುಗಳು ಯಾವುವು ನೋಡಿ:

1) ಗುರು ಹಿರಿಯರು, ಪೋಷಕರು ಹಾಗೂ ಸಂತರು ಬೃಹಸ್ಪತಿಯನ್ನು ಪ್ರತಿನಿಧಿಸುತ್ತಾರೆ. ಹಾಗಾಗಿ ಗುರುವಾರ ಮಾತ್ರವಲ್ಲ, ಯಾವ ದಿನವೂ ಕೂಡ ಇವರನ್ನು ಅವಮಾನಿಸಬಾರದು.

2) ಗುರುವಾರದಂದು ಮನೆಯಲ್ಲಿ ಕಿಚಡಿ ಮಾಡಬಾರದು ಹಾಗೂ ಸೇವಿಸಲೂ ಬಾರದು.

3) ಗುರುವಾರದಂದು ಮಹಿಳೆಯರು ತಮ್ಮ ತಲೆಕೂದಲನ್ನು ತೊಳೆಯಬಾರದು. ಇದರಿಂದ ಸಂಪತ್ತು, ಸಮೃದ್ಧಿ ಹಾಗೂ ಸಂತೋಷ ಕಡಿಮೆಯಾಗುತ್ತದೆ ಮತ್ತು ಗುರುಬಲ ಕಡಿಮೆಯಾಗುತ್ತದೆ ಎನ್ನಲಾಗಿದೆ.

4) ಗುರುವಾರದಂದು ಮನೆಯಲ್ಲಿ ಉಗುರುಗಳನ್ನು ಕತ್ತರಿಸಬಾರದು. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸಬಹುದು.

5) ಗುರುವಾರದ ದಿನ ಪುರುಷರಾಗಲಿ ಅಥವಾ ಮಹಿಳೆಯರಾಗಲಿ ತಲೆ ಕೂದಲನ್ನು ಕತ್ತರಿಸಬಾರದು. ಇದು ಗುರುಬಲವನ್ನು ದುರ್ಬಲಗೊಳಿಸುತ್ತದೆ ಮತ್ತು ಜೀವನದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ.

ಗುರುವಾರ ಮತ್ತು ನಾಳೆ ವಿಷ್ಣುವನ್ನು ಹಾಗೂ ಲಕ್ಷ್ಮಿ ದೇವಿಯನ್ನು ಆರಾಧಿಸಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ಕಂಡುಕೊಳ್ಳಿ. ಹಾಗೂ ಈ ದಿನ ಬಡವರಿಗೆ ದಾನ ಮಾಡುವುದನ್ನು ಮರೆಯದರಿ.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ 

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681