ವೋಟರ್ ಐಡಿ ಇಲ್ಲದಿದ್ದರೂ ಈ ದಾಖಲೆಗಳ ಮೂಲಕ ಮತದಾನ ಮಾಡಬಹುದು – Vishwanews24
ಬೆಂಗಳೂರು: ಮತದಾರರ ಪಟ್ಟಿಯನ್ನು ಕರಾರುವಕ್ಕಾಗಿ ಹಾಗೂ ಗುಣಮಟ್ಟವನ್ನು ಹೆಚ್ಚಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಅವರು ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು, ಇನ್ನು ಫೆ. 28 ರಂದು ಚುನವಣಾ ಆಯೋಗ ತನ್ನ ನಿರ್ದೇಶನದಲ್ಲಿ 11 ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಪರ್ಯಾಯವಾಗಿ ಬಳಸಲು ಅನುಮತಿ ನೀಡಿದೆ. ಯಾವುದೇ ವ್ಯಕ್ತಿ/ಮಹಿಳೆ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ, ಮತದಾರರ ಪಟ್ಟಿಯಲ್ಲಿ ಅವರ ಹೆಸರಿದ್ದು ಮತ್ತು ಅವರು ಮತದಾರರ ಗುರುತಿನ ಚೀಟಿಯನ್ನು ಪ್ರಸ್ತುತ ಪಡಿಸಲು ವಿಫಲರಾದರೆ ಈ ಕೆಳಕಂಡ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಪ್ರಸ್ತುತಪಡಿಸುವ ಮೂಲಕ ಮತದಾನ ಮಾಡಬಹುದಾಗಿದೆ ಅಂತ ತಿಳಿಸಿದ್ದಾರೆ.
1.ಪಾಸ್ ಪೋರ್ಟ್
2.ಡ್ರೈವಿಂಗ್ ಲೈಸನ್ಸ್
3.ಕೇಂದ್ರ/ರಾಜ್ಯ/ಪಿಎಸ್ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳ ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಚೀಟಿ
4.ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲಿ ನೀಡಿರುವ ಪಾಸ್ ಬುಕ್ಗಳು
5.ಪ್ಯಾನ್ ಕಾರ್ಡ್
6.ಆಧಾರ್ ಕಾರ್ಡ್
7.ಉದ್ಯೋಗ ಖಾತ್ರಿ ಗುರುತಿನ ಚೀಟಿ
8.ಕಾರ್ಮಿಕ ಇಲಾಖೆಯಿಂದ ನೀಡಲಾಗಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
9. ಭಾವಚಿತ್ರ ಹೊಂದಿರುವ ಪೆನ್ಶನ್ ಕಾರ್ಡ್ಗಳು
10.ಲೋಕಸಭಾ ಸದಸ್ಯರುಗಳು/ರಾಜ್ಯಸಭಾ ಸದಸ್ಯರುಗಳು/ಶಾಸಕರು/ವಿಧಾನಸಭಾ ಸದಸ್ಯರುಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ
11.ಆರ್ಜಿಐ ಮತ್ತು ಎನ್ಪಿಆರ್ ಮೂಲಕ ನೀಡಿರುವ ಸ್ಮಾಟ್ ಕಾರ್ಡ್
