ಶಂಕರಪುರ ಸಾಯಿ ಸಾಂತ್ವನ ಮಂದಿರ, ಪದ್ಮಶ್ರೀ ವಿಜೇತ, ಸೆಕ್ಸೋ ಫೋನ್ ವಾದಕ ಕದ್ರಿ ಗೋಪಾಲ್ ನಾಥ್ ಭೇಟಿ.
ಶಂಕರಪುರ ಸಾಯಿ ಸಾಂತ್ವನ ಮಂದಿರಕ್ಕೆ, ಪದ್ಮಶ್ರೀ ವಿಜೇತ, ಸೆಕ್ಸೋ ಫೋನ್ ವಾದಕ ಕದ್ರಿ ಗೋಪಾಲ್ ನಾಥ್ ಭೇಟಿ
ಕಾಪು: ಕಟಪಾಡಿ ಸಮೀಪದ ಶಂಕರಪುರದಲ್ಲಿ ಸಾವಿರಾರು ಭಕ್ತರಿಗೆ ಸಾಂತ್ವನ ಸಲಹೆ ನೀಡಿಕೊಂಡು ಬರುತ್ತಿರುವ ಸಾಯಿ ಸಾಂತ್ವನ ಮಂದಿರಕ್ಕೆ ಖ್ಯಾತ ಸೆಕ್ಸೋಫೋನ್ ವಾದಕ ,ಪದ್ಮಶ್ರೀ ವಿಜೇತ ಕದ್ರಿ ಗೋಪಾಲ್ ನಾಥ್ ಬೇಟಿ ನೀಡಿ ಸಾಯಿಬಾಬರ ಅನುಗ್ರಹಕ್ಕೆ ಪಾತ್ರರಾಗಿ , ಗುರೂಜಿ ಸಾಯಿ ಈಶ್ವರ್ ರ ಆಶೀರ್ವಾದ ಪಡೆದರು.
ಮಂದಿರದ ಸಮಾಜಮುಖಿ ಕಾರ್ಯಕ್ರಮಗಳಾದ ಸಾಯಿ ತುತ್ತು, ಸಾಯಿ ಸ್ಪರ್ಶ, ಪ್ರಾಣಿ ಪಕ್ಷಿಗಳ ಮೋಕ್ಷ ಚಿಂತನಗಳ ಕುರಿತು ಗುರೂಜಿಯೊಂದಿಗೆ ಚರ್ಚಿಸಿ ಶ್ಲಾಘಿಸಿದರು.
ತದನಂತರ ಮಾಧ್ಯಮದ ಜತೆ ಮಾತನಾಡುತ್ತಾ ” ಸಾಯಿ ಬಾಬ ಸರ್ವರ ಕಷ್ಟ ಗಳನ್ನ ನಿವಾರಿಸಲಿ,ಮತ್ತು ಶಂಕರಪುರ ಸಾಯಿ ಸಾಂತ್ವನಮಂದಿರದಲ್ಲಿ ನಡೆಸುವ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಗೌರವಾರ್ಥ ಎಂದರು”
ಈ ಸಂಧರ್ಭ ಟ್ರಸ್ಟ್ ನ ವಿವಿಧ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

