ಶಿರ್ವ: ಗಣರಾಜ್ಯೋತ್ಸವ ದಿನದ ಪರೇಡ್ನಲ್ಲಿ ವಿಶೇಷ ಅತಿಥಿಯಾಗಿ ಬಾಲಪ್ರತಿಭೆ ಏಡನ್ ಕ್ರಿಸ್ ದಾಂತಿ – ಜ. 26ರಂದು ದೆಹಲಿಯಲ್ಲಿ ಪುರಸ್ಕಾರ – Vishwanews24
ಶಿರ್ವ: ಗಣರಾಜ್ಯೋತ್ಸವ ದಿನದ ಪರೇಡ್ನಲ್ಲಿ ವಿಶೇಷ ಅತಿಥಿಯಾಗಿ ಬಾಲಪ್ರತಿಭೆ ಏಡನ್ ಕ್ರಿಸ್ ದಾಂತಿ ..
ಜ. 26ರಂದು ದೆಹಲಿಯಲ್ಲಿ ಪುರಸ್ಕಾರ
ಶಿರ್ವ: ಇಲ್ಲಿನ ಡಾನ್ ಬೊಸ್ಕೊ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿಯ ಏಡನ್ ಕ್ರಿಸ್ ದಾಂತಿ ಈ ವರ್ಷದ ಗಣರಾಜ್ಯೋತ್ಸವ ದಿನದ ಪರೇಡ್ನಲ್ಲಿ ದೇಶದ ರಕ್ಷಣ ಸಚಿವ ರಾಜ್ನಾಥ ಸಿಂಗ್ ಅವರ ವಿಶೇಷ ಅತಿಥಿಯಾಗಿ ಭಾಗವಹಿಸಿ ಪುರಸ್ಕಾರ ಪಡೆಯಲಿದ್ದಾರೆ.
ನ. 22ರಂದು ರಕ್ಷಣ ಸಚಿವಾಲಯವು ವೀರ್ಗಾಥಾ -2.0 ಎಂಬ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ದೇಶದ ರಕ್ಷಣೆ ಮಾಡುವ ವೀರ ಯೋಧರ ಜೀವನದ ಬಗ್ಗೆ ಅವರಿಂದ ವಿದ್ಯಾರ್ಥಿಗಳಿಗೆ ಸಿಗುವ ಸ್ಫೂರ್ತಿಯ ಬಗ್ಗೆ ಕಥೆ, ಕವನ, ಪ್ರಬಂಧ, ಚಿತ್ರಕಲೆ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಇನ್ನು ಏಡನ್ ಕ್ರಿಸ್ ದಾಂತಿ ವೀರ ಯೋಧ ಪರಮ್ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ವಿಕ್ರಮ್ ಭಾತ್ರಾ ಅವರ ಜೀವನದ ಬಗ್ಗೆ ಹಿಂದಿ ಕವನ ರಚಿಸಿದ್ದು, ಜ. 3ರಂದು ಇದರ ಫಲಿತಾಂಶ ಪ್ರಕಟಗೊಂಡಿದ್ದು, ದೇಶದ ಸರ್ವಶೇಷ್ಠ 25 ವಿದ್ಯಾರ್ಥಿಗಳಲ್ಲಿ ಏಡನ್ ಕ್ರಿಸ್ ಒಬ್ಬರಾಗಿ ಆಯ್ಕೆಗೊಂಡಿದ್ದಾರೆ.
ಶಿರ್ವಸಂತ ಮೇರಿ ಹಾಗೂ ಡಾನ್ ಬೊಸ್ಕೊ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ| ಡಾ| ಲೆಸ್ಲಿ ಡಿ’ಸೋಜಾ, ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲ ವಂ| ರೋಲ್ವಿನ್ ಅರಾನ್ಹ ಹರ್ಷ ವ್ಯಕ್ತಪಡಿಸಿದ್ದಾರೆ.
Join our Whatsapp group by clicking the below link 👇👇
https://chat.whatsapp.com/BflK0tvHXPi6Sm8xRHrT1F
