ಶಿರ್ವ: ಸಬ್ ಇನ್‌ಸ್ಪೆಕ್ಟರ್ ಹೆಸರಿನಲ್ಲಿ ಕರೆ ಮಾಡಿ 11 ಲಕ್ಷ ರೂ. ವಂಚನೆ – vishwanews24

Featured, ಉಡುಪಿ

ಶಿರ್ವ: ಸಬ್ ಇನ್‌ಸ್ಪೆಕ್ಟರ್ ಹೆಸರಿನಲ್ಲಿ ಕರೆ ಮಾಡಿ 11 ಲಕ್ಷ ರೂ. ವಂಚನೆ

ಶಿರ್ವ: ಅಪರಿಚಿತ ವ್ಯಕ್ತಿಗಳು ಮುಂಬಯಿಯ ಸಬ್ ಇನ್‌ಸ್ಪೆಕ್ಟರ್ ಹೆಸರಿನಲ್ಲಿ ಕರೆ ಮಾಡಿ 11 ಲಕ್ಷ ರೂ. ವಂಚಿಸಿದ ಘಟನೆ ಶಿರ್ವದಲ್ಲಿ ನಡೆದಿದೆ. ಶಿರ್ವ ನಿವಾಸಿ ವಿಲಿಯಮ್ ಪಾವ್ಲ್ ಕೊರೆಯ ವಂಚನೆಗೊಳಗಾದವರು.

ಜೂ. 28 ರಂದು ಅಪರಿಚಿತ ವ್ಯಕ್ತಿಯೋರ್ವ ವಿಲಿಯಮ್ ಪಾವ್ ಕೊರೆಯ ಅವರ ಮೊಬೈಲ್ ಗೆ ಕರೆ ಮಾಡಿ ಹಿಂದಿ ಭಾಷೆಯಲ್ಲಿ ನಿಮ್ಮ ಹೆಸರಿನ ಒಂದು ಸಿಮ್ ಸಮಸ್ಯೆ ಆಗಿದೆ. ಈ ನಂಬರ್ ನಲ್ಲಿ 20 ಕೇಸ್ ದಾಖಲಾಗಿದೆ.

ಉಡುಪಿ : ಮಲಬಾರ್ ಗೋಲ್ಡ್‌ನಿಂದ ರಕ್ತದಾನ ಶಿಬಿರ ; ರಕ್ತದಾನಿಗಳಿಗೆ ಸನ್ಮಾನ – vishwanews24

ಮನಿ ಲಾಂಡ್ರಿಂಗ್ ಕೇಸ್ ನ ಜೆಸ್ಸಿ ಮೊಹಮ್ಮದ್ ಕೇಸ್ ನಲ್ಲಿ ನಿಮ್ಮ ಹೆಸರಿದೆ ಎಂದು ಹೇಳಿ 6 ಜನರ ಫೋಟೋ ಕಳಿಸಿ ಇವರ ಪರಿಚಯ ಇದೆಯೇ ಎಂದು ಕೇಳಿ ಹೆದರಿಸಿದ್ದಾರೆ. ಅಲ್ಲದೇ ಸಬ್ ಇನ್‌ಸ್ಪೆಕ್ಟರ್‌ ಮ್ಯಾಥ್ಯು ಕೊಲಬಾ ಪೊಲೀಸ್ ಸ್ಟೇಷನ್ ಎಂದು ಮಾತನಾಡಿ, ವಿಲಿಯಮ್ ಪಾವ್ ಕೊರೆಯ ಅವರಲ್ಲಿ ಕೂಡಲೇ ಹಣ ಹಾಕುವಂತೆ ತಿಳಿಸಿದಾಗ ಅವರು ಭಯದಿಂದ ಯೂನಿಯನ್ ಬ್ಯಾಂಕ್ ನ ಎರಡು ಖಾತೆಯಿಂದ ಜು. 29 ರಂದು ರೂ. 6 ಲಕ್ಷ ಹಾಗೂ ಜು. 30 ರಂದು ರೂ. 5 ಲಕ್ಷ ಹಣವನ್ನು ವರ್ಗಾಯಿಸಿ ವಂಚನೆಗೆ ಒಳಗಾಗಿದ್ದಾರೆ. ಮ್ಯಾಥ್ಯು ಮತ್ತು ಇತರೆ ಅಪರಿಚಿತ ವ್ಯಕ್ತಿಗಳು ಸಬ್ ಇನ್‌ಸ್ಪೆಕ್ಟರ್ ಮ್ಯಾಥ್ಯು ಕೊಲಬಾ ಪೊಲೀಸ್ ಸ್ಟೇಷನ್ ಎಂದು ನಂಬಿಸಿ, ವಂಚನೆ ಮಾಡಿರುವುದಾಗಿ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾವಣ್ಯ ಹತ್ಯೆ ಪ್ರಕರಣ: ಆರೋಪಿ ಚೇತನ್‌ಗೆ ನ್ಯಾಯಾಂಗ ಬಂಧನ – vishwanews24

Leave a Reply