ಶಿರ್ವ : ಸಮಸ್ಯೆಯಿಂದ ಬಳಲುತ್ತಿರುವ ಬಡ ಕುಟುಂಬಕ್ಕೆ ಬೇಕಾಗಿದೆ ನೆರವಿನ ಸಹಾಯ ಹಸ್ತ – vishwanews24
ಸಮಸ್ಯೆಯಿಂದ ಬಳಲುತ್ತಿರುವ ಬಡ ಕುಟುಂಬಕ್ಕೆ ಬೇಕಾಗಿದೆ ನೆರವಿನ ಸಹಾಯ ಹಸ್ತ
ಶಿರ್ವ ನಿವಾಸಿಯಾದ ದಯಾನಂದ ಪ್ರಸ್ತುತ ಮೂಡುಬೆಳ್ಳೆ ಕಟ್ಟಿಂಗೇರಿ ಗೋಕಲ್ ಎಂಬಲ್ಲಿ ವಾಸವಾಗಿರುವ ಇವರು ತೀವ್ರ ಬಡತನದಲ್ಲಿ ಇದ್ದು ಸಂಸಾರ ನಿರ್ವಹಣೆಗಾಗಿ ಕೆಲಸ ಮಾಡಿಕೊಂಡು ತನ್ನ ಹೆಂಡತಿ ಹಾಗೂ ಮೂರು ಜನ ಗಂಡು ಮಕ್ಕಳಿಗೆ ಆಸರೆಯಾಗಿದ್ದರು.
ಎಂದಿನಂತೆ ಇವರು ಮೊನ್ನೆ ಕೆಲಸದಲ್ಲಿರುವಾಗ ಮರದ ತುಂಡು ಕಾಲಿಗೆ ಬಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಡಾಕ್ಟರ್ ಹೇಳುವ ಪ್ರಕಾರ ಇವರಿಗೆ ಇನ್ನೂ ಒಂದು ವರ್ಷ ಕೆಲಸ ಮಾಡಲು ಸಾಧ್ಯವಿಲ್ಲ ಆದ ಕಾರಣ ದಯವಿಟ್ಟು ತಮ್ಮ ಕೈಲಾದಷ್ಟು ಧನ ಸಹಾಯವನ್ನು ನೀಡಿ.

