ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 10 ಲಕ್ಷ ರೂ.ವಂಚನೆ ಪ್ರಕರಣ: ಮಹಿಳೆ ಬಂಧನ – vishwanews24
ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 10 ಲಕ್ಷ ರೂ.ವಂಚನೆ ಪ್ರಕರಣ: ಮುಂಬಯಲ್ಲಿ ಉಡುಪಿ ಮೂಲದ ಮಹಿಳೆ ಬಂಧನ
ಮುಂಬೈ,: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿ ಮಹಿಳೆ ಹಾಗೂ ಆಕೆಯ ಸಹೋದರನಿಗೆ ಸುಮಾರು 10 ಲಕ್ಷ ರೂ. ವಂಚನೆ ಮಾಡಿದ ಆರೋಪದ ಮೇಲೆ ಉಡುಪಿ ಮೂಲದ ಮಹಿಳೆಯನ್ನು ಕಾಂದಿವಲಿ ಪಶ್ಚಿಮ ಪೊಲೀಸರು ಬಂಧಿಸಿದ್ದಾರೆ. ಚೆಕ್ ಬೌನ್ಸ್ ಹಾಗೂ ವಂಚನೆ ಪ್ರಕರಣಗಳಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತ ಆರೋಪಿಯನ್ನು ಉಡುಪಿ ಜಿಲ್ಲೆಯ ಕೊಳಲಗಿರಿ-ಕುಕ್ಕಿಕಟ್ಟೆ ಮೂಲದ ದೀಪಿಕಾ ಮನೋಜ್ ಶೆಟ್ಟಿ ಎಂದು ಗುರುತಿಸಲಾಗಿದೆ. ರಜನಿ(60) ದಯಾನಂದ ಶೆಟ್ಟಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ದೂರುದಾರೆ ರಜನಿ ಅವರ ಸೋದರಸಂಬಂಧಿ ಹರೀಶ್ ಶೆಟ್ಟಿ ಅವರು ನಿರ್ಮಲ್ ಬಂಗ್ ಎಂಬ ಸ್ಟಾಕ್ ಬ್ರೋಕಿಂಗ್ ಏಜೆನ್ಸಿಯಲ್ಲಿ ಖಾತೆಯನ್ನು ಹೊಂದಿದ್ದರು. ಅದೇ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ರಜನಿ ಅವರಿಗೆ ದೀಪಿಕಾ ಪರಿಚಯವಾಗಿದ್ದಳು.
ಮಂಗಳೂರು : ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಬಳಿ ಮೊಬೈಲ್ ಪತ್ತೆ ; ಪ್ರಕರಣ ದಾಖಲು – vishwanews24
2024ರ ಸೆಪ್ಟೆಂಬರ್ನಲ್ಲಿ ಕಮಲಾ ವಿಹಾರ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಭೇಟಿಯ ವೇಳೆ, 1 ಲಕ್ಷ ಹೂಡಿಕೆ ಮಾಡಿದರೆ ಮೂರು ತಿಂಗಳ ಬಳಿಕ ಪ್ರತಿ ತಿಂಗಳು 20 ಶೇಕಡಾ ಲಾಭದಂತೆ 60,000 ರೂ. ಆದಾಯ ಸಿಗುತ್ತದೆ ಎಂದು ದೀಪಿಕಾ ರಜನಿ ಅವರಿಗೆ ಭರವಸೆ ನೀಡಿದ್ದಳು ಎನ್ನಲಾಗಿದೆ.
ಆಕೆಯ ಮಾತುಗಳನ್ನು ನಂಬಿದ ರಜನಿ, 2024ರ ಅಕ್ಟೋಬರ್ನಿಂದ ಡಿಸೆಂಬರ್ ನಡುವೆ ಹಂತ ಹಂತವಾಗಿ ತಮ್ಮ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಆರ್ಟಿಜಿಎಸ್ ಮೂಲಕ ದೀಪಿಕಾ ಅವರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ ಒಟ್ಟು 9 ಲಕ್ಷ ರೂ. ವರ್ಗಾಯಿಸಿದ್ದಾರೆ. ಇದೇ ವೇಳೆ, ರಜನಿಯ ಸಹೋದರ ಹರೀಶ್ ಶೆಟ್ಟಿ ಅವರು ತಮ್ಮ ಭಾರತ್ ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ.ಯನ್ನು ದೀಪಿಕಾ ಖಾತೆಗೆ ವರ್ಗಾಯಿಸಿದ್ದರು.
ನಂತರ, ದೀಪಿಕಾ ಅವರು ಲಾಭಾಂಶವನ್ನೂ ನೀಡಲಿಲ್ಲ, ಅಸಲು ಹಣವನ್ನೂ ಹಿಂದಿರುಗಿಸಲಿಲ್ಲ. ಹಣ ಮರಳಿಸುವಂತೆ ಒತ್ತಾಯಿಸಿದಾಗ, ದೀಪಿಕಾ ತಮ್ಮ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಖಾತೆಗಳಿಂದ 8,58,600 ರೂ. ಮೌಲ್ಯದ ಚೆಕ್ಗಳನ್ನು ನೀಡಿದ್ದಳು. ಆದರೆ, ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಚೆಕ್ಗಳು ಬೌನ್ಸ್ ಆಗಿದ್ದು, ಬಳಿಕ ದೀಪಿಕಾ ಸಂಪರ್ಕ ತಪ್ಪಿಸಲು ಆರಂಭಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ತೂರು: ಕೋಮು ಪ್ರಚೋದನೆ ಆರೋಪ ; 7 ವೆಬ್ ನ್ಯೂಸ್, ಸಾಮಾಜಿಕ ಜಾಲತಾಣಗಳ ವಿರುದ್ಧ ಪ್ರಕರಣ ದಾಖಲು – vishwanews24
ತಾವು ಸುಮಾರು 10 ಲಕ್ಷ ವಂಚನೆಗೆ ಒಳಗಾಗಿರುವುದು ಅರಿತ ರಜನಿ, ಕಾಂದಿವಲಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕಾಂದಿವಲಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ನಿರೀಕ್ಷಕ ಸೋಹನ್ ಸುರೇಶ್ ರಾವ್ ಕಡಂ ಅವರು ಮುಖ್ಯ ಪೊಲೀಸ್ ನಿರೀಕ್ಷಕ ಕರಣ್ ಗುಣಾಜಿ ಸೋನಿ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸಿದರು. ಬಳಿಕ ದೀಪಿಕಾ ಶೆಟ್ಟಿಯನ್ನು ಬಂಧಿಸಿದ ಪೊಲೀಸರು, ವಂಚನೆಗೆ ಒಳಗಾದ ಹಣವನ್ನು ಮರುಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಆಕೆಯನ್ನು ಮುಂಬೈ ನಾಗಪಾಡಾದಲ್ಲಿರುವ ಬೈಕುಲ್ಲಾ ಮಹಿಳಾ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಚೀನಾದ ಶೂ ರಾಜಧಾನಿ’ಯಲ್ಲಿ ಭಾರೀ ಅಗ್ನಿ ಅವಘಡ ; 28 ಮಂದಿ ಸಜೀವ ದಹನ – vishwanews24
