ಸದ್ಯ ಉಡುಪಿಯ ಬ್ರಹ್ಮಗಿರಿ ಸರ್ಕಲ್ ಬೂದಿ ಮುಚ್ಚಿದ ಕೆಂಡದ ವಾತಾವರಣ: ಸರ್ಕಲ್ ಸುತ್ತ ಖಾಕಿ ಸರ್ಪಗಾವಲು: vishwanews24
ಸದ್ಯ ಉಡುಪಿಯ ಬ್ರಹ್ಮಗಿರಿ
ಸರ್ಕಲ್ ಬೂದಿ ಮುಚ್ಚಿದ
ಕೆಂಡದ ವಾತಾವರಣ:
ಸರ್ಕಲ್ ಸುತ್ತ ಖಾಕಿ
ಸರ್ಪಗಾವಲು:
vishwanews24
ಉಡುಪಿ: ಸದ್ಯ ಉಡುಪಿ ಜಿಲ್ಲೆಯಲ್ಲಿ ಸಾವರ್ಕರ್ ಬ್ಯಾನರ್ ಬಾರಿ ಸುದ್ದಿ ಮಾಡುತ್ತಿದೆ.

ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹಿಂದೂ ಮಹಾಸಭಾದ ಮುಖ್ಯಸ್ಥ ಪ್ರಮೋದ್ ಉಚ್ಚಿಲ್ ಅವರು ಅಳವಡಿಸಿರುವಂತಹ ಸಾವರ್ಕರ್ ಅವರ ಬ್ಯಾನರ್ ಸದ್ಯ ರಾಜಕೀಯ ಪಕ್ಷಗಳಿಗೆ ಬಾಡೂಟವಾಗಿದೆ.

ಒಂದು ಕಡೆಯಲ್ಲಿ ಕಾಂಗ್ರೆಸ್ ಇದನ್ನು ತೀವ್ರವಾಗಿ ವಿರೋಧ ಮಾಡಿದರೆ ಬಿಜೆಪಿ ಪಕ್ಷದ ಮುಖಂಡರು ಪುಷ್ಪಾರ್ಚನೆ ಮಾಡುವ ಮುಖಾಂತರ ಸಾವರ್ಕರ್ ಅವರಿಗೆ ಬೆಂಬಲ ಘೋಷಿಸುವ ಕೆಲಸವನ್ನು ಮಾಡುತ್ತಿದೆ. ಎಲ್ಲಾ ಬೆಳವಣಿಗೆ ನಡುವೆ ಸರ್ಕಲ್ ಹಾಗೂ ಬ್ರಹ್ಮಗಿರಿಯ ಸುತ್ತ ಖಾಕಿ ಸರ್ಪಗಾವಲು ಬಿಗಿಯಾಗಿದೆ.

