ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬಾರದು ; ತಾಳ್ಮೆಯಿಂದ ಹೋರಾಟ ವಾಪಸ್ ತೆಗೆದುಕೊಳ್ಳಿ : ಆಶಾ ಕಾರ್ಯಕರ್ತೆಯರಿಗೆ ಸಿಎಂ ಮನವಿ -vishwanews24

Featured, ರಾಜ್ಯ ನ್ಯೂಸ್

ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬಾರದು ; ತಾಳ್ಮೆಯಿಂದ ಹೋರಾಟ ವಾಪಸ್ ತೆಗೆದುಕೊಳ್ಳಿ : ಆಶಾ ಕಾರ್ಯಕರ್ತೆಯರಿಗೆ ಸಿಎಂ ಮನವಿ

ಬೆಂಗಳೂರು: ಆಶಾ ಕಾರ್ಯಕರ್ತೆಯರು ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬಾರದು. ಅಷ್ಟು ಹಠ ಇರಬಾರದು. ಹೆಣ್ಣುಮಕ್ಕಳು ಮನೆಯ ಕಣ್ಣು ಎಂಬುದು ನನಗೆ ಅರಿವಿದೆ. ತಾಳ್ಮೆಯಿಂದ ಹೋರಾಟ ವಾಪಸ್ ತೆಗೆದುಕೊಳ್ಳಿ ಎಂದು ಸಿಎಂ ಡಿಕೆ ಶಿವಕುಮಾರ್ ಆಶಾ ಕಾರ್ಯಕರ್ತೆಯರ ಬಳಿ ಮನವಿ ಮಾಡಿದ್ದಾರೆ.

ಸಂವಿಧಾನ ದಿನಾಚರಣೆ ಹಿನ್ನೆಲೆ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡುತ್ತಿದ್ದೇವೆ. ಶುಕ್ರವಾರ ಸಂಜೆ ನಾನು ಬಂದ ಮೇಲೆ ಮಾತಾಡುತ್ತೇನೆ. ಕೆಲವರು ಬಂದು ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಯಾಕೆ ಮಾತನಾಡುತ್ತಿಲ್ಲ. ಪ್ರಣಾಳಿಕೆಯಲ್ಲಿ ಹೇಳಿದ ಮೇಲೆ ನಾವು ಮಾಡಿದ್ದೇವೆ, ಈಗಲೂ ಮಾಡುತ್ತೇವೆ ಎಂದರು.

ಆಶಾ ಕಾರ್ಯಕರ್ತೆಯರನ್ನು ಶುಕ್ರವಾರ ಸಂಜೆ ಭೇಟಿ ಮಾಡುತ್ತೇನೆ. ಈಗಲೂ ಅವರಿಗೆ ಮನವಿ ಮಾಡುತ್ತೇನೆ. ದಯವಿಟ್ಟು ಪ್ರತಿಷ್ಠೆ ಬಿಡಿ. ಸರ್ಕಾರವನ್ನು ಹೆದರಿಸಬಾರದು, ಮನವಿ ಮಾಡಲಿ. ಹೆಣ್ಣು ಕುಟುಂಬದ ಕಣ್ಣು. ಇಷ್ಟೊಂದು ಹಠ ಏಕೆ? ಹೆಣ್ಣು ಮಕ್ಕಳ ಮೇಲೆ ನಮಗೆ ಗೌರವ ಇದೆ. ದಯವಿಟ್ಟು ಪ್ರತಿಭಟನೆ ವಾಪಸ್ ಪಡೆದುಕೊಳ್ಳಿ. ಖಾದರ್, ನರೇಂದ್ರ ಸ್ವಾಮಿ ಹೇಳಿಕೆಗಳು ತಪ್ಪು. ಅದೆಲ್ಲ ಸರಿಯಲ್ಲ. ನಮಗೆ ಎಲ್ಲರೂ ಬೇಕು. ನಮ್ಮ ಮೇಲೆ ಆಶಾ ಕಾರ್ಯಕರ್ತೆಯರು ವಿಶ್ವಾಸ ಇಡಲಿ. ನಾವು ಅವರ ಸಮಸ್ಯೆ ಪರಿಹಾರ ಮಾಡೇ ಮಾಡುತ್ತೇವೆ ಎಂದು ಭರವಸೆ ನೀಡಿದರು.

Leave a Reply