ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸುವ ಮರ್ಡರ್ : ಹೆಂಡತಿ ಮೇಲಿನ ಸಿಟ್ಟಿಗೆ ಪತಿಯಿಂದ ಏಳು ಜನರ ಕೊಲೆ – vishwanews24 https://wp.me/p9KQap-vaX
ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸುವ ಮರ್ಡರ್ – ಹೆಂಡತಿ ಮೇಲಿನ ಸಿಟ್ಟಿಗೆ ಪತಿ ಏಳು ಜನರ ಕೊಲೆ
ನಂದಿಬೆಟ್ಟದ ಕಾಡಿನಲ್ಲಿ ಬಾಲಕನ ಶವ ಪತ್ತೆ; ತನಿಖೆ ಚುರುಕು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸುವ ಮರ್ಡರ್ವೊಂದು ನಡೆದಿದೆ. ಹೆಂಡತಿ ಮೇಲಿನ ಸಿಟ್ಟಿಗೆ ಪತಿ ಏಳು ಜನರನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶ್ರೀರಾಂಪುರದಲ್ಲಿ ಬೆಳಕಿಗೆ ಬಂದಿದೆ.
ಆರೋಪಿಯನ್ನು ಶ್ರೀರಾಂಪುರ ನಿವಾಸಿ ಶೇಖರ್ ಎಂದು ಗುರುತಿಸಲಾಗಿದ್ದು, ಖಾಸಗಿ ಕಂಪನಿಯೊಂದಕ್ಕೆ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ಕನ್ನಡದ ಹಿರಿಯ ಸಾಹಿತಿ, ಭಾಷಾತಜ್ಞ ಪ್ರೊ. ಕೆ.ವಿ. ನಾರಾಯಣ ನಿಧನ – vishwanews24
ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಏಳು ಜನರ ನರಮೇಧ ಪ್ರಕರಣದ ತನಿಖೆಗಿಳಿದ ಪೊಲೀಸರಿಗೆ ನಂದಿಬೆಟ್ಟದ ರಂಗಪ್ಪ ಸರ್ಕಲ್ನ ರಸ್ತೆಯ ಎಡ ಭಾಗದ ಕಾಡಿನಲ್ಲಿ ಶವ ಪತ್ತೆಯಾಗಿದೆ.
ನಂದಿಬೆಟ್ಟದ ರಂಗಪ್ಪ ಸರ್ಕಲ್ ರಸ್ತೆಯ ಎಡಭಾಗದಲ್ಲಿರುವ ಕಾಡಿನ ಪ್ರದೇಶದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:
ಆನೇಕಲ್ : ನಿರ್ಮಾಣ ಹಂತದ ಕಾಂಕ್ರೀಟ್ ಕಾಮಗಾರಿ ವೇಳೆ ದುರಂತ; ಮೂವರು ಕಾರ್ಮಿಕರು ಸಾವು – vishwanews24
ಇನ್ನೂ ಆರೋಪಿಯನ್ನ ನಂದಿಬೆಟ್ಟಕ್ಕೆ ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಬಳಿಕ ಮೃತದೇಹವನ್ನ ಅಂಬುಲೆನ್ಸ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇನ್ನೂ 6 ಮೃತದೇಹಗಳಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಇಂದುಶೇಖರ್ ನೀಡಿರುವ ಹೇಳಿಕೆಯ ಆಧಾರದ ಮೇಲೆ ವಿವಿಧ ಪ್ರದೇಶಗಳಲ್ಲಿ ಹುಡುಕಾಟ ಮುಂದುವರಿದಿದೆ. ನಂದಿ ಬೆಟ್ಟದ ಸ್ಕಂದಗಿರಿ ಪ್ರದೇಶದಲ್ಲಿ ಮೃತದೇಹಗಳಿಗಾಗಿ ಶೋಧ ನಡೆಸಲಾಗುತ್ತಿದೆ. ತಮಿಳುನಾಡಿನ ಸೇಲಂ ಪ್ರದೇಶಕ್ಕೂ ವಿಶೇಷ ಪೊಲೀಸ್ ತಂಡವನ್ನ ಕಳುಹಿಸಲಾಗಿದೆ.
