ಸುರತ್ಕಲ್: ಎನ್‍.ಐ.ಟಿ.ಕೆ ಟೋಲ್ ಗೇಟ್ ಬಳಿ ಬೈಕ್ ಅಪಘಾತ – ಹಿಂಬದಿ ಸವಾರ ಮೃತ್ಯು – Vishwanews24

Featured, ದಕ್ಷಿಣ ಕನ್ನಡ

ಸುರತ್ಕಲ್: ಎನ್‍.ಐ.ಟಿ.ಕೆ ಟೋಲ್ ಗೇಟ್ ಬಳಿ ಬೈಕ್ ಅಪಘಾತ – ಹಿಂಬದಿ ಸವಾರ ಮೃತ್ಯು

ಸುರತ್ಕಲ್ : ಇಲ್ಲಿನ ಎನ್‍.ಐ.ಟಿ.ಕೆ ಟೋಲ್ ಗೇಟ್ ಬಳಿ ಬೈಕ್ ಅಪಘಾತಕ್ಕೀಡಾಗಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಬಜ್ಪೆ ಕಂಜಾರು ಶ್ರೀದೇವಿ ಕಾಲೇಜು ವಿದ್ಯಾರ್ಥಿ ಮೂಲತಃ ಮಡಿಕೇರಿಯ ಸೋಮವಾರಪೇಟೆ ಬಿಟಿ ಕಟ್ಟೆಯ ನಿವಾಸಿ ಶಶಾಂಕ್(21) ಮೃತಪಟ್ಟ ಯುವಕ. ಇವರು ನಿನ್ನೆ ತಡರಾತ್ರಿ ತನ್ನ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಸುರತ್ಕಲ್ ಕಡೆಯಿಂದ ಮುಲ್ಕಿ ಕಡೆ ಸಂಚರಿಸುತ್ತಿದ್ದ ವೇಳೆ ಸುರತ್ಕಲ್ ಟೋಲ್ ಗೇಟ್ ಬಳಿ ಬೈಕ್ ಅಪಘಾತಕ್ಕೀಡಾಗಿದೆ. ಬೈಕ್ ನಲ್ಲಿ ಹಿಂಬದಿ ಸವಾರರಾಗಿ ತೆರಳುತ್ತಿದ್ದ ಇವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಆತನ ಸ್ನೇಹಿತನಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ತಕ್ಷಣ ವಾಹನ ಸವಾರರು ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅತ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಉಡುಪಿ: ಗೆಲ್ಲುವವರನ್ನು ಸೋಲಿಸುವ, ಸೋಲುವವರನ್ನು ಗೆಲ್ಲಿಸುವ ಶಕ್ತಿ ಬಂಟ ಸಮುದಾಯಕ್ಕೆ ಇದೆ : ಜಯಕರ ಶೆಟ್ಟಿ ಇಂದ್ರಾಳಿ – Vishwanews24

ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply