ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ – vishwanews24
ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ
ಬೆಂಗಳೂರು: ನನಗೆ ಮದ ಅಂತ ಹೇಳುತ್ತಾರೆ. ಮದ ಇಳಿಸಲಿ ಯಾರು ಬೇಡ ಅಂದರು. ಮದ ನನಗೆ ಇದ್ದರೆ ಇಳಿಸಲಿ ಎಂದು ಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಲಿಂಗಾಯತ ಸ್ವಾಮೀಜಿಗಳು ನನ್ನ ಸೇವೆ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಸಿಎಂ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆ ತಿರುಚಲಾಗಿದೆ. ನನ್ನ ಸೇವೆ ಮಾಡಬೇಕು ಅಂತ ನಾನು ಸ್ವಾಮೀಜಿಗಳಿಗೆ ಹೇಳಿಲ್ಲ. ಯಾವ ಸ್ವಾಮೀಜಿಗೂ ನಾನು ಅಗೌರವ ತೋರಿಸಿಲ್ಲ. ನಾನು ಜನರಿಗೆ, ಮತದಾರರಿಗೆ ಅದನ್ನ ಹೇಳಿದ್ದು. ಸ್ವಾಮೀಜಿಗಳಿಗೆ ನಾನು ಹೇಳಿಲ್ಲ. ಅವರ ಪ್ರತಿನಿಧಿಗಳಿಗೆ, ಮತದಾರರಿಗೆ ನಮ್ಮ ಸೇವೆ ಮಾಡಬೇಕು, ನಮ್ಮ ರಕ್ಷಣೆ ಮಾಡಬೇಕು ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಎಚ್ಚರ ತಪ್ಪಿದರೆ ಎಂಆರ್ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24
