ಹಲಾಲ್ v/s ಜಟ್ಕಾ ಕಟ್ ವಿವಾದ ಮಧ್ಯೆ ಪಶು ಸಂಗೋಪನಾ ಇಲಾಖೆಯಿಂದ ಮಹತ್ವದ ಆದೇಶ – Vishwanews24

ಉಡುಪಿ, ರಾಜ್ಯ ನ್ಯೂಸ್

ಹಲಾಲ್ v/s ಜಟ್ಕಾ ಕಟ್ ವಿವಾದ ಮಧ್ಯೆ ಪಶು ಸಂಗೋಪನಾ ಇಲಾಖೆಯಿಂದ ಮಹತ್ವದ ಆದೇಶ

ಮೊದಲಿಗೆ ಪ್ರಾಣಿ ಹಿಂಸೆ ತಡೆಗಟ್ಟಿ ಎಂದು ಆದೇಶ..

ಪ್ರಾಣಿ ವಧೆಗೂ ಮುನ್ನ ಸ್ಟನಿಂಗ್ ಮಾಡಲು ಸೂಚನೆ..

ಬೆಂಗಳೂರು: ರಾಜ್ಯದಲ್ಲಿ ಹಲಾಲ್ ಕಟ್ ಜಟ್ಕಾ ಕಟ್ ವಿವಾದ ಮಧ್ಯೆ ಪಶು ಸಂಗೋಪನಾ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಪಶುಸಂಗೋಪನೆ ಇಲಾಖೆ ಖಡಕ್ ಆದೇಶ ಹೊರಡಿಸಿದ್ದು, ಮೊದಲಿಗೆ ಪ್ರಾಣಿ ಹಿಂಸೆ ತಡೆಗಟ್ಟಿ ಎಂದು ಆದೇಶ ಹೊರಡಿಸಲಾಗಿದೆ.

ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು ಎಂದು ಸೂಚನೆ ನೀಡಲಾಗಿದೆ.

ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಇನ್ನು ಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್ (stunning) ಕಡ್ಡಾಯ ಎಂದು ಸರ್ಕಾರದ ಆದೇಶ ಹೇಳಿದೆ.

ಪ್ರಾಣಿ ವಧೆಗೂ ಮುನ್ನ ಸ್ಟನಿಂಗ್ ಮಾಡಲು ಸೂಚನೆ ನೀಡಲಾಗಿದ್ದು, ಸ್ಟನ್ನಿಂಗ್ ಸಿಸ್ಟಮ್ ಇರುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಪ್ರಾಣಿ ಹತ್ಯೆಗೂ ಮುನ್ನಾ ಪ್ರಾಣಿಗಳಿಗೆ ಪ್ರಜ್ಞೆ ತಪ್ಪಿಸಬೇಕಾಗುತ್ತದೆ. ಪ್ರಜ್ಞೆ ತಪ್ಪಿಸುವುದರಿಂದ ಪ್ರಾಣಿಗಳನ್ನು ಸಾಯಿಸುವಾಗ‌ ಅವುಗಳಿಗೆ ನೋವು ತಿಳಿಯುವುದಿಲ್ಲ. ಯಾವುದೇ ಅಂಗಡಿಗಳಲ್ಲಿ ಇದನ್ನು ಪಾಲನೆ ಮಾಡದ ಹಿನ್ನೆಲೆ, ಅನೇಕ ದೂರುಗಳು ಪಶು ಸಂಗೋಪನಾ ಇಲಾಖೆಗೆ ಬಂದಿದ್ದವು. ಹೀಗಾಗಿ ಈಗ ಆದೇಶ ಹೊರಡಿಸಲಾಗಿದೆ.

ಆರ್ಯನ್ ಖಾನ್ ಡ್ರಗ್ಸ್ ಕೇಸ್‌ ಪ್ರಕರಣ: ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್‍ ಹೃದಯಾಘಾತದಿಂದ ನಿಧನ – Vishwanews24

Leave a Reply