ಕುಂದಾಪುರ : ಹಿಂದುಳಿದ ವರ್ಗದ 32 ಸಮುದಾಯ ಭವನಗಳಿಗೆ 6.74 ಕೋಟಿ ರೂ. ಬಿಡುಗಡೆ : ಸಚಿವ ಕೋಟ – Vishwanews24

Featured, ಉಡುಪಿ

ಕುಂದಾಪುರ : ಹಿಂದುಳಿದ ವರ್ಗದ 32 ಸಮುದಾಯ ಭವನಗಳಿಗೆ 6.74 ಕೋಟಿ ರೂ. ಬಿಡುಗಡೆ : ಸಚಿವ ಕೋಟ – Vishwanews24

ಕುಂದಾಪುರ : ಹಿಂದುಳಿದ ವರ್ಗದ 32 ಸಮುದಾಯ ಭವನಗಳಿಗೆ ಏಕಕಾಲದಲ್ಲಿ 6.74 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ನಾರಾಯಣ ಗುರುಗಳ ಹೆಸರಿನಲ್ಲಿ ಅಂದಾಜು 29 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ, ಉಡುಪಿ, ಮಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 4 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಂದಾಪುರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸಮಾಜ ಕಲ್ಯಾಣ, ಕಂದಾಯ ಹಾಗೂ ಇತರ ಅಧಿಕಾರಿಗಳ ಸಭೆಯ ಬಳಿಕ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಈ ಬಾರಿಯ ಬಜೆಟ್ ಅಧಿವೇಶನ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಆರೋಗ್ಯಕರವಾಗಿ ನಡೆದಿರುವುದು ಸಮಾಧಾನ ತಂದಿದೆ. ರಾಜ್ಯ ಜನರ ಹಲವಷ್ಟು ಸಮಸ್ಯೆ, ಬೇಡಿಕೆ ಹಾಗೂ ಅಭಿವೃಧ್ಧಿ ವಿಚಾರಗಳ ಕುರಿತು ಸಾಕಷ್ಟು ಚರ್ಚೆ ಹಾಗೂ ವಿಚಾರ ವಿನಿಮಯ ನಡೆದಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಪ್ರಾಸ್ತಾಪನೆಯ ಮೇರೆಗೆ ಒಂದು ಶಾಲೆಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಬೇಕು ಎನ್ನುವ ಯೋಚನೆ ಇದೆ. ಕೋವಿಡ್-19 ರ ಕಾರಣದಿಂದಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಎಲ್ಲ ಜನಪರ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಪುನರಾಂಭಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿರುವುದು ನಮಗೆ ಸಮಾಧಾನ ತಂದಿದೆ ಎಂದರು.

ಹಲಾಲ್ v/s ಜಟ್ಕಾ ಕಟ್ ವಿವಾದ ಮಧ್ಯೆ ಪಶು ಸಂಗೋಪನಾ ಇಲಾಖೆಯಿಂದ ಮಹತ್ವದ ಆದೇಶ – Vishwanews24

ಸಿದ್ದಾಪುರದ ವಸತಿ ಶಾಲೆಯ ವಿಚಾರದಲ್ಲಿ ಒಂದಷ್ಟು ಗೊಂದಲಗಳಾಗಿದ್ದರಿಂದ, ಅನೀವಾರ್ಯವಾಗಿ ಒಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕಾಯ್ತು. ಇದೀಗ ಬೇರೆಯವರಿಗೆ ಪರಭಾರೆಯನ್ನು ವಹಿಸಲಾಗಿದೆ. ಇದೀಗ ವಿವಾದ ಬಗೆಹರಿಸಲು ಕ್ರಮ ಕೈಗೊಂಡಿದ್ದು, ಈಗಾಗಲೇ ಅಡ್ವೋಕೇಟ್ ಜನರಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ಒಂದು ವಾರದ ಒಳಗೆ ಶಾಸಕರ ಲಭ್ಯತೆಯನ್ನು ನೋಡಿಕೊಂಡು ಕಟ್ಟದ ಶಂಕು ಸ್ಥಾಪನೆ ನೇರವೇರಿಸಲಾಗುವುದು. ರಾಮಕ್ಷತ್ರೀಯ ಹಾಗೂ ಹಿಂದೂ ಕ್ಷತ್ರೀಯ ಒಂದೇ ಆಗಿರುವುದರಿಂದ ನಮ್ಮನ್ನು ರಾಮಕ್ಷತ್ರೀಯ ಎಂದು ಘೋಷಣೆ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಕೆಲವರ ಪ್ರಾಸ್ತಾಪ ಬಂದಿರುವುದರಿಂದ ಈ ಕುರಿತು ಅಧ್ಯಯನ ನಡೆಸಿ ಅಂತಿಮವಾಗಿ ಆಯೋಗ ಅಥವಾ ಇಲಾಖೆ ಘೋಷಣೆ ಮಾಡಲಿದೆ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಹೆಸರಿನಲ್ಲಿ 21 ಸೈನಿಕ ಶಾಲೆಯನ್ನು ತೆರೆಯಲು ಅನುಮೋದನೆ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ನಮ್ಮ ಇಲಾಖೆಯ ಮೂಲಕ 180 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿ ಕಟ್ಟಲಾಗಿರುವ ಕಟ್ಟಡದಲ್ಲಿ ಒಂದು ಸೈನಿಕ ಶಾಲೆ ಆರಂಭಿಸಲು ಅನುಮೋದನೆ ದೊರಕಿರುವುದು ನಮಗೆ ಸಂತೋಷವನ್ನು ಉಂಟು ಮಾಡಿದ್ದು, ಈ ತಿಂಗಳ ಮುಕ್ತಾಯದ ಮೊದಲು, ಕೇಂದ್ರ ಸರ್ಕಾರದ ಸಹಭಾಗೀತ್ವದಲ್ಲಿ ಈ ಶಾಲೆಯ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಸುಮಾರು 800 ಹಿಂದುಳಿದ ವರ್ಗಗಳ ಸಮುದಾಯ ಭವನಗಳಿಗಾಗಿ 122.5 ಕೋಟಿ. ರೂ. ಹಣವನ್ನು ನೇರವಾಗಿ ಸಮುದಾಯ ಭವನ ನಿರ್ವಹಣ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ, ತಹಶೀಲ್ದಾರ್ ಕಿರಣ್ ಗೌರಯ್ಯ, ಸಚಿವರ ಆಪ್ತ ಸಹಾಯಕ ಹರೀಶ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ದೇವೇಂದ್ರ ಬಿರಾದಾರ್, ದೂದ್ ಪೀರ್, ರಾಘವೇಂದ್ರ ವರ್ಣೀಕರ್, ಗಣೇಶ್ ನಾಯಕ್ ಇದ್ದರು.

ಆರ್ಯನ್ ಖಾನ್ ಡ್ರಗ್ಸ್ ಕೇಸ್‌ ಪ್ರಕರಣ: ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್‍ ಹೃದಯಾಘಾತದಿಂದ ನಿಧನ – Vishwanews24

Leave a Reply