ಹಿಜಾಬ್ ನಿಷೇಧ : ಟಿಸಿ ಪಡೆದುಕೊಂಡ ದ.ಕ, ಉಡುಪಿಯ 145 ಮುಸ್ಲಿಂ ವಿದ್ಯಾರ್ಥಿನಿಯರು – Vishwanews24
ಹಿಜಾಬ್ ನಿಷೇಧ- ಟಿಸಿ ಪಡೆದುಕೊಂಡ ದ.ಕ, ಉಡುಪಿಯ 145 ಮುಸ್ಲಿಂ ವಿದ್ಯಾರ್ಥಿನಿಯರು
ಮಂಗಳೂರು : ತರಗತಿಗಳಲ್ಲಿ ಹಿಜಾಬ್ ಹಾಕುವಂತಿಲ್ಲ ಎಂಬ ಆದೇಶ ಹಿನ್ನೆಲೆಯಲ್ಲಿ ವಿವಿ ಸಂಯೋಜಿತ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಎರಡು, ಮೂರು, ನಾಲ್ಕು ಮತ್ತು ಐದನೇ ಸೆಮಿಸ್ಟರ್ ನ ಶೇ.16ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅವರು, ‘ಮುಸ್ಲಿಂ ವಿದ್ಯಾರ್ಥಿನಿ ಯರು ಸಂಯೋಜಿತ ಕಾಲೇಜುಗಳಿಗೆ ಪ್ರವೇಶ ಪಡೆಯಲು ಸಹಾಯ ಮಾಡುವಂತೆ ವಿನಂತಿಸಿದ್ದರು. ಈ ಸಮಸ್ಯೆ ಪರಿಹರಿಸಲು ಸಾಧ್ಯವಾಗದ ಕಾರಣ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು ಸಂಪರ್ಕಿಸಲು ಅವರಿಗೆ ತಿಳಿಸಿದ್ದೆ. ಧರ್ಮಕ್ಕಿಂತ ಶಿಕ್ಷಣ ಮುಖ್ಯ ಎಂಬುದನ್ನು ಕೂಡ ಹೇಳಿದ್ದೇನೆ’ ಎಂದರು.
ಇನ್ನು ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಲಾದ ಮಾಹಿತಿಯಲ್ಲಿ 16 ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದು ಕಾಲೇಜಿನಿಂದ ಹೊರಗುಳಿದಿರುವುದು ತಿಳಿದು ಬಂದಿದ್ದು, 2020-21, 2021-22ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವೇಶ ಪಡೆದಿದ್ದ ಒಟ್ಟು 900 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 145 ವಿದ್ಯಾರ್ಥಿನಿಯರು ತಮ್ಮ ಟಿಸಿ ಪಡೆದಿದ್ದಾರೆ. ವಿವಿ ವ್ಯಾಪ್ತಿಯಲ್ಲಿ ಬರುವ ಕೊಡಗಿನ ಸರ್ಕಾರಿ,ಅನುದಾನಿತ 10 ಕಾಲೇಜುಗಳಲ್ಲಿ ಓದುತ್ತಿರುವ 113 ಮುಸ್ಲಿಂ ವಿದ್ಯಾರ್ಥಿನಿಯರು ಇದೇ ಕಾಲೇಜುಗಳಲ್ಲಿ ಶಿಕ್ಷಣ ಮುಂದುವರಿಸಿದ್ದಾರೆ.
ಕೆ ಎಂ ಎಫ್ ವತಿಯಿಂದ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಪರಿಕರ ಕೊಡುಗೆ: vishwanews24
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 39 ಸರ್ಕಾರಿ ಕಾಲೇಜುಗಳು, 36 ಅನುದಾನಿತ ಕಾಲೇಜುಗಳು ಇದ್ದು, ಕಾಲೇಜು ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿದವರಲ್ಲಿ ಸರ್ಕಾರಿ ಕಾಲೇಜಿನವರು ಶೇ. 34ರಷ್ಟಿದ್ದಾರೆ. ಹಾಗೂ ಅನುದಾನಿತ ಕಾಲೇಜಿನ ಶೇ 8ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಇದ್ದಾರೆ.
ಮಂಗಳೂರಿನ ಕಾರ್ಸ್ಟ್ರೀಟ್ನಲ್ಲಿರುವ ಡಾ.ಪಿ. ದಯಾನಂದ ಪೈ-ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 51 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 35 ವಿದ್ಯಾರ್ಥಿಗಳು ತಮ್ಮ ಟಿಸಿಗಳನ್ನು ಪಡೆದು ಕೊಂಡು ಹೋಗಿದ್ದಾರೆ. ಹಾಗೂ ಹಳೇ ಅಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ, ಮೂರು ಮತ್ತು ನಾಲ್ಕನೇ ಸೆಮಿಸ್ಟರ್ ನಲ್ಲಿ ತರಗತಿಗೆ ಹಾಜರಾಗಿದ್ದ 20 ವಿದ್ಯಾರ್ಥಿನಿಯರು ಎರಡು, ನಾಲ್ಕು ಮತ್ತು ಆರನೇ ಸೆಮಿಸ್ಟರ್ನಲ್ಲಿರುವಾಗಲೇ ಕಾಲೇಜಿಗೆ ಬರುವುದನ್ನು ಬಿಟ್ಟಿದ್ದಾರೆ. ‘ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ, ಅವರು ಅದನ್ನು ನಿರ್ಲಕ್ಷಿಸಿದ್ದಾರೆ ಮತ್ತು ಟಿಸಿಯನ್ನು ಸಹ ಪಡೆದಿಲ್ಲ’ ಎಂದು ಪ್ರಾಂಶುಪಾಲ ಶ್ರೀಧರ್ ಅವರು ತಿಳಿಸಿದ್ದಾರೆ.
ಉಡುಪಿ : ಕೃಷ್ಣನಗರಿಯಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ – Vishwanews24
