ಮಂಗಳೂರು: ಅನಧಿಕೃತ ಮತ್ತು ವಿವಾದಾತ್ಮಕ ಫ್ಲೆಕ್ಸ್ ಹಾಕಿದ್ರೆ ನಿರ್ದಾಕ್ಷಿಣ್ಯ ಕ್ರಮ :  ಜಿಲ್ಲಾಧಿಕಾರಿ ಸೂಚನೆ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಅನಧಿಕೃತ ಮತ್ತು ವಿವಾದಾತ್ಮಕ ಫ್ಲೆಕ್ಸ್ ಹಾಕಿದ್ರೆ ನಿರ್ದಾಕ್ಷಿಣ್ಯ ಕ್ರಮ : 

ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ರಾಜ್ಯದಲ್ಲಿ ಇದೀಗ ಫ್ಲೆಕ್ಸ್‌ ಬ್ಯಾನರ್‌ಗಳ ವಿಚಾರವಾಗಿ ಹಲವೆಡೆ ವಿವಾದ ತಾರಕಕ್ಕೇರಿದ್ದು, ಇದ್ರಿಂದ ಎಚ್ಚೆತ್ತುಕೊಂಡ ದ.ಕ‌ ಜಿಲ್ಲಾಡಳಿತ ನಿನ್ನೆ ಅಧಿಕಾರಿಗಳ ಸಭೆ ‌ನಡೆಸಿದೆ. .

ಮಂಗಳೂರು ‌ಕಮಿಷನರ್ ಶಶಿಕುಮಾರ್, ಎಸ್ಪಿ‌ ಹೃಷಿಕೇಶ್, ಜಿ.ಪಂ‌ ಸಿಇಓ ಕುಮಾರ್, ಪಾಲಿಕೆ ‌ಕಮಿಷನರ್ ಅಕ್ಷಯ್ ಶ್ರೀಧರ್ ‌ಭಾಗಿಯಾದ ಈ ಸಭೆಯಲ್ಲಿ ಜಿಲ್ಲೆಯಲ್ಲಿ ‌ಫ್ಲೆಕ್ಸ್ ಅಳವಡಿಕೆ ಸಂಬಂಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅನಧಿಕೃತ ಮತ್ತು ವಿವಾದಾತ್ಮಕ ಫ್ಲೆಕ್ಸ್ ತೆರವಿಗೆ ಡಿಸಿ ರಾಜೇಂದ್ರ ಸೂಚನೆ ನೀಡಿದ್ದಾರೆ. ಅನಧಿಕೃತ ಫ್ಲೆಕ್ಸ್ ಹಾಕಿದ್ರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಬೇಕು. ಅನಧಿಕೃತ ಫ್ಲೆಕ್ಸ್ ಹಾಕಿದವರ ವಿರುದ್ದ ಪೊಲೀಸ್ ವರದಿಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಹಿಜಾಬ್ ನಿಷೇಧ : ಟಿಸಿ ಪಡೆದುಕೊಂಡ ದ.ಕ, ಉಡುಪಿಯ 145 ಮುಸ್ಲಿಂ ವಿದ್ಯಾರ್ಥಿನಿಯರು – Vishwanews24

Leave a Reply