ಅಕ್ಟೋಬರ್ 2 ರಂದು ಉಚ್ಚಿಲ ದಸರಾ – ಬೃಹತ್ ಶೋಭಾಯಾತ್ರೆ ; ವಾಹನ ಚಾಲಕರಿಗೆ ವಿಶೇಷ ಸೂಚನೆ  – vishwanews24

Featured, ಉಡುಪಿ

ಅಕ್ಟೋಬರ್ 2 ರಂದು ಉಚ್ಚಿಲ ದಸರಾ – ಬೃಹತ್ ಶೋಭಾಯಾತ್ರೆ 

ವಾಹನ ಚಾಲಕರಿಗೆ ವಿಶೇಷ ಸೂಚನೆ

ದಿನಾಂಕ: 02.10.2025 ರಂದು ಉಡುಪಿ – ಉಚ್ಚಿಲ ದಸರಾ 2025 ಪ್ರಯುಕ್ತ ಬೃಹತ್‌ ಶೋಭಾಯತ್ರೆ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿ -66 ರಲ್ಲಿ ಸಾಗಲಿರುವುದರಿಂದ ವಾಹನ ದಟ್ಟಣೆಯಾಗಿ ಟ್ರಾಫಿಕ್‌ ಜ್ಯಾಮ್‌ ಆಗುವ ಸಾದ್ಯತೆ ಇರುವುದರಿಂದ ಉಡುಪಿ-ಮಂಗಳೂರು ಮಾರ್ಗವಾಗಿ ಬರುವ ಘನ ವಾಹನಗಳನ್ನು ಸಂಜೆ 5:00 ಗಂಟೆಯಿಂದ ರಾತ್ರಿ 9:00 ಗಂಟೆವರೆಗೆ ಬದಲಿ ಮಾರ್ಗವಾಗಿ ಕಟಪಾಡಿ-ಶಿರ್ವ-ಬೆಳ್ಮಣ್‌-ಪಡುಬಿದ್ರಿ ಮಾರ್ಗವಾಗಿ ಸಂಚರಿಸುವುದು.

ಉಡುಪಿ ಕಡೆಯಿಂದ ಬಜ್ಪೆ ಏರ್‌ಪೋರ್ಟ್‌ ಹೋಗುವ ವಾಹನಗಳು ಕಟಪಾಡಿ-ಶಿರ್ವ-ಬೆಳ್ಮಣ್‌-ಮುಂಡ್ಕೂರು ಮಾರ್ಗವಾಗಿ ಸಂಚರಿಸುವುದು. ಹಾಗೂ

ಟ್ರಕ್‌, ಲಾರಿ, ಟ್ಯಾಂಕರ್‌ ಮುಂತಾದ ಘನ ವಾಹನಗಳನ್ನು ರಾತ್ರಿ 9:00 ಗಂಟೆಯವರೆಗೆ ಕುಂದಾಪುರ, ಉಡುಪಿ ಕಡೆಗಳಲ್ಲಿ ಟ್ರಕ್‌ಬೇಯಲ್ಲಿ ನಿಲ್ಲಿಸಿ ನಂತರ ಸಂಚಾರ ಮುಂದುವರಿಸುವುದು.

*ಉಡುಪಿ ಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರು ಸಂಚರಿಸುವ ರಾತ್ರಿ ಪ್ರಯಾಣಿಕ ಬಸ್ಸುಗಳು ರಾತ್ರಿ 9:00 ಗಂಟೆ ನಂತರ ಉಡುಪಿ ಯಿಂದ ಸಂಚರಿಸಬಹುದಾಗಿದೆ*.

ಮಂಗಳೂರು-ಉಡುಪಿ ಮಾರ್ಗವಾಗಿ ಸಾಗುವ ಘನ ವಾಹನಗಳು ಸಂಜೆ 5:00 ರಿಂದ ರಾತ್ರಿ 10:00 ಗಂಟೆ ಮಧ್ಯೆ ಸಂಚರಿಸಬಾರದಾಗಿ ಸೂಚಿಸಿದೆ.

Leave a Reply