ಅಗ್ರಿಗೋಲ್ಡ್ ಸಂತ್ರಸ್ತರ ಬಾಂಡ್ ಪರಿಶೀಲನೆಗೆ ಉಡುಪಿ ಎಸ್ಪಿ ಕಚೇರಿಯಲ್ಲಿ ದಿನ ನಿಗದಿ – vishwanews24
ಅಗ್ರಿಗೋಲ್ಡ್ ವಂಚನೆ ಪ್ರಕರಣ: ಉಡುಪಿಯಲ್ಲಿ ಎಸ್ಪಿ ಕಚೇರಿಯಲ್ಲಿ 600ಕ್ಕೂ ಅಧಿಕ ಸಂತ್ರಸ್ತರು
ಸಂತ್ರಸ್ತರ ಬಾಂಡ್ ಪರಿಶೀಲನೆಗೆ ಉಡುಪಿ ಎಸ್ಪಿ ಕಚೇರಿಯಲ್ಲಿ ದಿನ ನಿಗದಿ
ತಾಲೂಕುವಾರು ದಿನ ನಿಗದಿ… ಪ್ರಮುಖ ಸೂಚನೆಗಳು ಹೀಗಿವೆ
ಉಡುಪಿ: ಆಂಧ್ರಪ್ರದೇಶ ಮೂಲದ ಅಗ್ರಿಗೋಲ್ಡ್ ಸಂಸ್ಥೆಯ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಣ ವಾಪಸ್ ಸಿಗಲಿದೆ ಎಂಬ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಬುಧವಾರ 600ಕ್ಕೂ ಅಧಿಕ ಸಂತ್ರಸ್ತರು ಬನ್ನಂಜೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ್ದು, ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಕಳೆದುಕೊಂಡಿರುವ ಸಂತ್ರಸ್ತರಿಗೆ ಕಂಪೆನಿ ನೀಡಿದ್ದ ಬಾಂಡ್ಗಳ ಪರಿಶೀಲನೆಗಾಗಿ ಆಂಧ್ರಪ್ರದೇಶದ ತನಿಖಾ ಸಂಸ್ಥೆಯ ಅಧಿಕಾರಿಗಳು ಮಂಗಳವಾರ ಉಡುಪಿ ಎಸ್ಪಿ ಕಚೇರಿಗೆ ಆಗಮಿಸಿದ್ದರು. ಬುಧವಾರ ದಿಂದ ಪರಿಶೀಲನೆ ನಡೆಸಲು ಕೆಲವು ಸಂತ್ರಸ್ತರಿಗೆ ಟೋಕನ್ ಕೂಡ ನೀಡಿದ್ದರು. ಈ ವಿಷಯ ಜನರಿಂದ ಜನರಿಗೆ ಹಬ್ಬಿದ್ದು, ನೂರಾರು ಮಂದಿ ಸಂತ್ರಸ್ತರು ಆಗಮಿಸಿದ್ದರು. ಇದರಿಂದ ಸ್ಥಳದಲ್ಲಿ ಜನದಟ್ಟಣೆ ಸಹಿತ ಗೊಂದಲದ ವಾತಾವರಣ ಉಂಟಾಗಿದ್ದು, ಪೊಲೀಸ್ ಅಧಿ ಕಾರಿಗಳು ಮಧ್ಯ ಪ್ರವೇಶಿಸಿ ಸಂತ್ರಸ್ತರಿಗೆ ವಿಷಯ ಮನವರಿಕೆ ಮಾಡಿದ ಬಳಿಕ ಬಹಳಷ್ಟು ಮಂದಿ ಸ್ಥಳದಿಂದ ಹಿಂದಿರುಗಿದರು.
ಉತ್ತರ ಕನ್ನಡದ ಭಟ್ಕಳ, ಹೊನ್ನಾವರ, ಉಡುಪಿಯ ಶಿರೂರು, ಬೈಂದೂರು, ಕುಂದಾಪುರ, ಕೊಲ್ಲೂರು ಸಹಿತ ದೂರದ ಊರುಗಳಿಂದ ಹಿರಿಯ ನಾಗರಿಕರು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಪೊಲೀಸ್ ಅಧಿಕಾರಿಗಳು ಸಂತ್ರಸ್ತರಿಗೆ ಶಾಮಿಯಾನ ಅಳವಡಿಸಿ, ಕುಳಿತು ಕೊಳ್ಳಲು ಕುರ್ಚಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು.
ಮಂಗಳೂರು : 9ನೇ ತರಗತಿ ಬಾಲಕಿ ಅಪಹರಣ ಪ್ರಕರಣ ; ಬಾಗಲಕೋಟೆ ಮೂಲದ ಯುವಕ ಬಂಧನ – vishwanews24
ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರು ಆಗಮಿಸಿದ್ದರಿಂದ ಟೋಕನ್ ಪಡೆ ಯಲು ಗೊಂದಲದ ವಾತಾವರಣ ನಿರ್ಮಾಣವಾಯಿತು. ಟೋಕನ್ ನೀಡಿ ಎಂದು ಮಹಿಳೆಯರು ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದರು.
ಅಗ್ರಿಗೋಲ್ಡ್ ಪ್ರಕರಣ ಏನು?
ಅಗ್ರಿಗೋಲ್ಡ್ ಹಗರಣವು ದೇಶದ ಹಲವು ರಾಜ್ಯಗಳಲ್ಲಿ ನಡೆದ ಬೃಹತ್ ಆರ್ಥಿಕ ವಂಚನೆಯಾಗಿದೆ. ಸಂಸ್ಥೆಯು ಹೂಡಿಕೆದಾರರಿಗೆ ಹೆಚ್ಚಿನ ಲಾಭದ ಭರವಸೆ ನೀಡಿ ಕೋಟ್ಯಂತರ ಹಣ ಪಡೆದು ವಂಚಿಸಿತ್ತು. ಸುಮಾರು 32 ಲಕ್ಷ ಹೂಡಿಕೆದಾರರು ಅಂದಾಜು 6,380 ಕೋ.ರೂ. ಹಣವನ್ನು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಪರಿಶೀಲನೆಗೆ ದಿನ ನಿಗದಿ: ಅ. 29ರಂದು ಹೆಬ್ರಿ ತಾಲೂಕಿನ ಸಂತ್ರಸ್ತರು. ಅ. 30ರಂದು ಮುನಿಯಾಲು ಹಾಗೂ ಆಸುಪಾಸಿನ ಗ್ರಾಮಗಳ ಸಂತ್ರಸ್ತರು. ಅ. 31ರಂದು ಅಜೆಕಾರು ಹಾಗೂ ಆಸುಪಾಸಿನ ಗ್ರಾಮಗಳ ಸಂತ್ರಸ್ತರು.
ಮಂಗಳೂರು : 9ನೇ ತರಗತಿ ಬಾಲಕಿ ಅಪಹರಣ ಪ್ರಕರಣ ; ಬಾಗಲಕೋಟೆ ಮೂಲದ ಯುವಕ ಬಂಧನ – vishwanews24
ದಾಖಲೆ ಪರಿಶೀಲನೆ
ರಾಜ್ಯದ 8 ಜಿಲ್ಲೆಗಳ ಎಸ್ಪಿ ಕಚೇರಿಯಲ್ಲಿ ಅಗ್ರಿಗೋಲ್ಡ್ ಸಂತ್ರಸ್ತರ ದಾಖಲೆ ಪರಿಶೀಲನೆ ನಡೆಯುತ್ತಿದೆ. ಉಡುಪಿ ಬನ್ನಂಜೆಯ ಎಸ್ಪಿ ಕಚೇರಿ ಯಲ್ಲಿ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಸಂಬಂಧಿಸಿ ಸಂತ್ರಸ್ತರ ದಾಖಲೆ ಪರಿಶೀಲನೆ ನಡೆಯುತ್ತಿದೆ. ಡಿವೈಎಸ್ಪಿ ಬೆಳ್ಳಿಯಪ್ಪ ಆಂಧ್ರದ ಅಧಿಕಾರಿ ಗಳೊಂದಿಗೆ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಂಗಳೂರಿನಲ್ಲಿ ಶೀಘ್ರದಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದೆ.
ತಾಲೂಕುವಾರು ದಿನ ನಿಗದಿ
ಮೊದಲ ದಿನ ಆದ್ದರಿಂದ ಸ್ವಲ್ಪ ಗೊಂದಲ ಉಂಟಾಗಿದೆ. ಅಧಿಕಾರಿಗಳಿಂದ ಮಾಹಿತಿ ಪಡೆದು ತಾಲೂಕುವಾರು ದಿನ ನಿಗದಿ ಮಾಡಿ ಸಂತ್ರಸ್ತರಿಗೆ ದಾಖಲೆ ಪರಿಶೀಲನೆಗೆ ಬರಲು ಹೇಳಲಾಗುವುದು. ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಸಂತ್ರಸ್ತರು ಉಡುಪಿಗೆ ಬರುತ್ತಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 40,000ರಿಂದ 50,000 ಸಂತ್ರಸ್ತರು ಇದ್ದಾರೆಂದು ಅಂದಾಜಿಸಲಾಗಿದೆ.
– ಹರಿರಾಮ್ ಶಂಕರ್, ಎಸ್ಪಿ, ಉಡುಪಿ
ಮಂಗಳೂರು : 9ನೇ ತರಗತಿ ಬಾಲಕಿ ಅಪಹರಣ ಪ್ರಕರಣ ; ಬಾಗಲಕೋಟೆ ಮೂಲದ ಯುವಕ ಬಂಧನ – vishwanews24
ಪ್ರಮುಖ ಸೂಚನೆಗಳು
ಪ್ರತಿದಿನ ಪ್ರಥಮವಾಗಿ ಆಗಮಿಸುವ 150 ಗ್ರಾಹಕರಿಗೆ ಮಾತ್ರ ಟೋಕನ್ ನೀಡಲಾಗುವುದು. ಬೆಳಗ್ಗೆ 8 ಗಂಟೆಯಿಂದ ಟೋಕನ್ ವಿತರಣೆ ಪ್ರಾರಂಭ.
ಅಂಗವೈಕಲ್ಯ, ಅನಾರೋಗ್ಯ ಅಥವಾ ಇತರ ಆರೋಗ್ಯ ಸಮಸ್ಯೆಗಳಿಂದ ಸ್ವತಃ ಹಾಜರಾಗಲು ಸಾಧ್ಯವಾಗದ ಗ್ರಾಹಕರ ಪರವಾಗಿ ಅವರ ಏಜೆಂಟ್ಗಳು, ಸಂಬಂಧಿಕರು ಬಾಂಡ್ಗಳನ್ನು ತಂದು ಸಲ್ಲಿಸಬೇಕು.
ಮಾಹಿತಿಗಾಗಿ 08202526444 ಅಥವಾ 9480805400 ಸಂಖ್ಯೆಗಳನ್ನು ಸಂಪರ್ಕಿಸಬಹುದು.
