ಅನಾಥ ವೃದ್ದೆಗೆ ಆಸರೆಯಾದ ಪಾಂಗಳ ನಾಗೇಶ್ ಭಂಡಾರಿ.-vishwanews24
ಅನಾಥ ವೃದ್ದೆಗೆ ಆಸರೆಯಾದ ಪಾಂಗಳ ನಾಗೇಶ್ ಭಂಡಾರಿ.
ಕಾಪು: ಪಾಂಗಳ ಬಸ್ ತಂಗುದಾಣದಲ್ಲಿ ಅನಾಥೆಯಾಗಿ ಕುಳಿತಿದ್ದ ಹಿರಿಯ ವೃದ್ದೆಯನ್ನು ರಕ್ಷಿಸಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಅನಾಥವಾಗಿ ಬಸ್ಸು ತಂಗುದಾಣದಲ್ಲಿ ಕುಳಿತಿದ್ದ ವೃದ್ಧೆಯ ಬಗ್ಗೆ ಸಾರ್ವಜನಿಕರು ಇನಂಜೆ ಗ್ರಾಮಪಂಚಾಯತ್ ನ ಮಾಜಿ ಸದಸ್ಯ ನಾಗೇಶ್ ಭಂಢಾರಿಗೆ ಮಾಹಿತಿ ಸ್ಪಂದಿಸಿ ವೃದ್ದೆಯನ್ನು ತನ್ನ ಖಾಸಗಿ ಕಾರಿನಲ್ಲಿ ಕರೆದೊಯ್ದು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯ ಮೌಲ್ಯ ಎತ್ತಿಹಿಡಿದಿದ್ದಾರೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.


