ಅನುಶ್ರೀ ಮಾದಕದ್ರವ್ಯ ಸೇವಿಸುತ್ತಿದ್ದರು, ಸಾಗಿಸುತ್ತಿದ್ದರು, ಸ್ನೇಹಿತರ ಜೊತೆಗೆ ಡ್ರಗ್ ಪಾರ್ಟಿ ಮಾಡುತ್ತಿದ್ದರು : ಕಿಶೋರ್ ಅಮನ್ ಶೆಟ್ಟಿ -Vishwanews24
ಡ್ರಗ್ಸ್ ಸೇವನೆಯಿಂದ ಡ್ಯಾನ್ಸ್ ಪ್ರಾಕ್ಟೀಸ್ ಸುಲಭ.
ಡ್ರಗ್ಸ್ ಸೇವಿಸಿ ಡ್ಯಾನ್ ಮಾಡಿದ್ರೆ ಖುಷಿ ಆಗುತ್ತೆ..
ಡ್ರಗ್ಸ್ ಸೇವಿಸಿದ್ರೆ ಡ್ಯಾನ್ಸ್ ಗೆ ತಾಕತ್ತು..
ಅನುಶ್ರೀ ಹೀಗೆ ನಮಗೆ ಹೇಳುತ್ತಿದ್ದರು..
ಸ್ಫೋಟಕ ಹೇಳಿಕೆ ಕೊಟ್ಟ ಕಿಶೋರ್ ಅಮನ್ ಶೆಟ್ಟಿ
ಮಂಗಳೂರು: ಡ್ರಗ್ಸ್ ಸೇವನೆಯಿಂದ ಡ್ಯಾನ್ಸ್ ಪ್ರಾಕ್ಟೀಸ್ ಸುಲಭ. ಡ್ರಗ್ಸ್ ಸೇವಿಸಿ ಡ್ಯಾನ್ ಮಾಡಿದ್ರೆ ಖುಷಿ ಆಗುತ್ತೆ. ಡ್ರಗ್ಸ್ ಸೇವಿಸಿದ್ರೆ ಡ್ಯಾನ್ಸ್ ಗೆ ತಾಕತ್ತು ಅನುಶ್ರೀ ಹೀಗೆ ನಮಗೆ ಹೇಳುತ್ತಿದ್ದರು ಎಂದು ಸ್ಫೋಟಕ ಹೇಳಿಕೆಯನ್ನು ಕಿಶೋರ್ ಅಮನ್ ಶೆಟ್ಟಿ ಮಂಗಳೂರು ಪೊಲೀಸರ ತನಿಖೆ ವೇಳೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಕಿಶೋರ್ ಅಮನ್ ಶೆಟ್ಟಿ ಆರೋಪ:
ಬೆಂಗಳೂರಿನಲ್ಲಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ನಾವು ಡ್ರಗ್ಸ್ ಸೇವನೆ ಮಾಡುತ್ತಿದ್ದೆವು. ಅನುಶ್ರೀಗೆ ದಂಧೆಕೋರರ ಪರಿಚಯವಿದೆ. ಅವರು ನಮಗೆ ಡ್ರಗ್ಸ್ ತಂದು ಕೊಡುತ್ತಿದ್ದರು ಕಿಶೋರ್ ಅಮನ್ ಶೆಟ್ಟಿ ಅನುಶ್ರೀ ವಿರುದ್ಧ ಹೇಳಿಕೆ ನೀಡಿದ್ದಾರೆ.
ಪೊಲೀಸರ ತನಿಖೆ ವೇಳೆ ತರುಣ್ ಅನುಶ್ರೀ ರಿಯಾಲಿಟಿ ಶೋ ಅಲ್ಲಿ ಗೆದ್ದಿದ್ದಕ್ಕೆ ಡ್ರಗ್ಸ್ ಪಾರ್ಟಿ ಮಾಡಿದ್ರು. ಖಾಸಗಿ ವಾಹಿನಿ ರಿಯಾಲಿಟಿ ಶೋವನ್ನು ಅನುಶ್ರೀ ಗೆದ್ದಿದ್ದರು. ಇದಕ್ಕಾಗಿ ಡ್ರಗ್ಸ್ ಪಾರ್ಟಿ ಮಾಡಿದ್ವಿ. ಡ್ರಗ್ಸ್ ಪಾರ್ಟಿ ಮಾಡೋದು ಅವರಿಗೂ ಕೂಡ ಗೊತ್ತಿತ್ತು. ಡ್ರಗ್ಸ್ ಪಾರ್ಟಿಯಲ್ಲಿ ನಾನು ನಮ್ಮ ಕೋರಿಯೋಗ್ರಾಫರ್ ಅನುಶ್ರೀ ಜೊತೆ ಸೇರಿ ಪಾರ್ಟಿಯನ್ನು ಮಾಡಿದ್ವಿ ಎಂದಿದ್ದರು.
ಅನುಶ್ರೀ ಮಾದಕದ್ರವ್ಯ ಸೇವಿಸುತ್ತಿದ್ದರು, ಸಾಗಿಸುತ್ತಿದ್ದರು. ಸ್ನೇಹಿತರ ಜೊತೆಗೆ ಅನುಶ್ರೀ ಡ್ರಗ್ ಪಾರ್ಟಿ ಮಾಡುತ್ತಿದ್ದರು. ರೂಂನಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಡ್ರಗ್ಸ್ ತರುತ್ತಿದ್ದರು. ಡ್ಯಾನ್ಸ್ ಪ್ರಾಕ್ಟೀಸ್ಗೆ ಬರುವಾಗ ಡ್ರಗ್ಸ್ ತರುತ್ತಿದ್ದರು. ಅವರೇ ಹೆಚ್ಚು ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಅವರೇ ಡ್ರಗ್ಸ್ ತಂದು ನಮಗೂ ಕೊಡುತ್ತಿದ್ದರು ಎಂದು ಕಿಶೋರ್ ಹೇಳಿದ್ದಾರೆ.
