ಅಪಘಾತದಲ್ಲಿ ಗಾಯಗೊಂಡು ನರಳುತ್ತಿದ್ದರೂ ಸಹಾಯಕ್ಕೆ ಬಾರದ ಜನ ; ತೀವ್ರ ರಕ್ತಸ್ರಾವವಾಗಿ ಯುವಕ ಸಾವು – ಉಡುಪಿಯಲ್ಲಿ ಅಮಾನವೀಯ ಘಟನೆ   – Vishwanews24

Featured, ಉಡುಪಿ

ಅಪಘಾತದಲ್ಲಿ ಗಾಯಗೊಂಡು ನರಳುತ್ತಿದ್ದರೂ ಸಹಾಯಕ್ಕೆ ಬಾರದ ಜನ ; ತೀವ್ರ ರಕ್ತಸ್ರಾವವಾಗಿ ಯುವಕ ಸಾವು – ಉಡುಪಿಯಲ್ಲಿ ಅಮಾನವೀಯ ಘಟನೆ  

ಉಡುಪಿ : ಅಪಘಾತದಲ್ಲಿ ಗಾಯಗೊಂಡು ವ್ಯಕ್ತಿ ನರಳುತ್ತಿದ್ದರೂ ಕೂಡ ಜನರು ಸಹಾಯಕ್ಕೆ ಬಾರದೇ ಅಮಾನವೀಯತೆಯಿಂದ ವರ್ತಿಸಿದ ಘಟನೆ ಉಡುಪಿಯ ಕಟಪಾಡಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡು ಗಾಯಾಳು ಆಸ್ಪತ್ರೆಗೆ ಸೇರಿಸುವಂತೆ ಗೋಗರೆದರೂ ಒಬ್ಬರು ಕೂಡ ಸಹಾಯಕ್ಕೆ ಬರದೇ ಮೂಕ ಪ್ರೇಕ್ಷಕರಾಗಿ ನಿಂತು ನೋಡಿದ ಘಟನೆ ನಡೆದಿದೆ.

ದೇವಾನು ದೈವಗಳ ಆಶೀರ್ವಾದ ಹಾಗೂ ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ : ರಿಷಬ್ ಶೆಟ್ಟಿ  – Vishwanews24

ಆದರೆ ತೀವ್ರ ರಕ್ತಸ್ರಾವವಾಗಿ ಯುವಕ ಸುಶಿಕ್ಷಿತ್ (20) ಮೃತಪಟ್ಟಿದ್ದಾನೆ. ತನ್ನ ಗೆಳೆಯರ ಜೊತೆ ಕ್ಯಾಟರಿಂಗ್ ಕೆಲಸಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದ ಯುವಕ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಗಂಭೀರವಾಗ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದನು. ಸಹಾಯ ಮಾಡುವಂತೆ ಆಸ್ಪತ್ರೆ ಧಾವಿಸುವಂತೆ ಅಂಗಲಾಚಿದರೂ ಕೂಡ ಯಾರೂ ನೆರವಿಗೆ ಧಾವಿಸಲಿಲ್ಲ.

ರಿಕ್ಷಾ ಆದರೂ ಕರೆತನ್ನಿ ಎಂದು ಗಾಯಾಳು ಪರಿ ಪರಿಯಾಗಿ ಬೇಡಿದರೂ ಕೂಡ ಒಬ್ಬರು ಕೂಡ ಸಹಾಯಕ್ಕೆ ಬರಲಿಲ್ಲ, ಕೊನೆಗೆ ಆತನ ಗೆಳೆಯರು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡಿದ್ದಾರೆ . ಆದರೆ ಆಸ್ಪತ್ರೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ. ಗೆಳೆಯರ ಆಕ್ರಂದನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉಡುಪಿ: ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸುಂಕ ಸಂಗ್ರಹಿಸದಂತೆ ಜಿಲ್ಲಾಧಿಕಾರಿಗೆ ಹೋರಾಟ ಸಮಿತಿ ಮನವಿ – Vishwanews24

Leave a Reply