ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನದ ವೇಳೆ ಹೆಂಡತಿಗೆ ಸಾರ್ವಜನಿಕವಾಗಿ  ಮುತ್ತಿಟ್ಟ ಗಂಡ ; ಜನರ ಗುಂಪಿಂದ ಹಿಗ್ಗಾಮುಗ್ಗಾ ಥಳಿತ – Vishwanews24

Featured, ರಾಷ್ಟ್ರ ನ್ಯೂಸ್

ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನದ ವೇಳೆ ಹೆಂಡತಿಗೆ ಸಾರ್ವಜನಿಕವಾಗಿ  ಮುತ್ತಿಟ್ಟ ಗಂಡ ; ಜನರ ಗುಂಪಿಂದ ಹಿಗ್ಗಾಮುಗ್ಗಾ ಥಳಿತ – Vishwanews24

ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸರಯೂ ನದಿಯ ದಂಡೆಯಲ್ಲಿರುವ ಘಾಟ್‌ಗಳ ಸರಣಿ ರಾಮ್ ಕಿ ಪೈಡಿಯಲ್ಲಿ ಸ್ನಾನ ಮಾಡುವಾಗ ಸಾರ್ವಜನಿಕವಾಗಿ ಪತ್ನಿಗೆ ಮುತ್ತಿಟ್ಟ ವ್ಯಕ್ತಿಯನ್ನು ಪಕ್ಕದಲ್ಲೇ ಇದ್ದ ಜನರ ಗುಂಪು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ತಮ್ಮ ಸುತ್ತಮುತ್ತ ಜನರಿದ್ದರು ಘಾಟ್​ನಲ್ಲಿ ಸ್ನಾನ ಮಾಡುತ್ತಿದ್ದ ದಂಪತಿ ಪರಸ್ಪರ ಚುಂಬಿಸುವುದನ್ನು ನೋಡಿದ ವ್ಯಕ್ತಿಯೊಬ್ಬ ಮಹಿಳೆಯ ಗಂಡನನ್ನು ಎಳೆದುಕೊಂಡು ಹೊಡೆಯಲು ಆರಂಭಿಸುತ್ತಾನೆ. ಈ ವೇಳೆ ಅಲ್ಲಿದ್ದ ಜನರೆಲ್ಲ ಸೇರಿ ಆತನ ಮೇಲೆ ಹಲ್ಲೆ ಮಾಡುವಾಗ ತನ್ನ ಗಂಡನ ಮೇಲೆ ಹಲ್ಲೆ ಮಾಡದಂತೆ ಪತ್ನಿ ತಡೆಯಲು ಯತ್ನಿಸುತ್ತಾಳೆ. ಇಬ್ಬರನ್ನು ನೀರಿನಿಂದ ಹೊರಗೆಳೆದು ಮಹಿಳೆಯ ಗಂಡನನ್ನು ಸುತ್ತುವರಿದು ಹಲ್ಲೆ ಮಾಡುತ್ತಾರೆ. ಇದಿಷ್ಟನ್ನು ವಿಡಿಯೋ ರೆಕಾರ್ಡ್​ ಮಾಡಲಾಗಿದೆ.

ವಿಡಿಯೋವನ್ನು ಅಶೋಕ್​ ಸ್ವೈನ್​ ಎಂಬುವರು ಶೇರ್​ ಮಾಡಿಕೊಂಡಿದ್ದಾರೆ. ಈ ವ್ಯಕ್ತಿ ತನ್ನ ಹೆಂಡತಿಗೆ ಮುತ್ತು ನೀಡಿ ತಪ್ಪು ಮಾಡಿಬಿಟ್ಟ. ಅಯೋಧ್ಯೆಯಲ್ಲಿರುವ ರಾಮಭಕ್ತರು ಹಲ್ಲೆಗೊಳಗಾದ ವ್ಯಕ್ತಿಜಯ ಪತ್ನಿಯ ಜತೆ ಅಸಭ್ಯವಾಗಿ ವರ್ತಿಸಿ, ವ್ಯಕ್ತಿಯನ್ನು ಥಳಿಸಿದ್ದಾರೆ, ಮುತ್ತಿಡುವುದು ಭಾರತೀಯ ಸಂಸ್ಕೃತಿಯಲ್ಲವಂತೆ. ಆದರೆ, ಗುಂಪು ಹಲ್ಲೆ ಸಂಸ್ಕೃತಿಯಲ್ಲಿ ಒಂದಂತೆ ಎಂದು ಅಶೋಕ್​ ಸ್ವೈನ್​ ಎಂಬುವರು ಟೀಕಿಸಿದ್ದಾರೆ.

ಈ ಘಟನೆಯ ಬಗ್ಗೆ ಮಾತನಾಡಿರುವ ಅಯೋಧ್ಯೆಯ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಶೈಲೇಶ್ ಪಾಂಡೆ, ಈ ವಿಡಿಯೋ ಒಂದು ವಾರ ಹಳೆಯದಾಗಿದೆ ಮತ್ತು ಈ ವಿಷಯದಲ್ಲಿ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ಈಗ ದಂಪತಿಗಳು ಎಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಕ್ರಮ ತೆಗೆದುಕೊಳ್ಳಲು ಬಯಸಿದರೆ ಅವರು ದೂರು ದಾಖಲಿಸಬಹುದು ಎಂದಿದ್ದಾರೆ

Leave a Reply