ಅರ್ಜುನ ಪ್ರಾಣ ಕಳೆದುಕೊಂಡ ಜಾಗ ಹಾಗೂ ಮೈಸೂರಿನ ಎಚ್‌ಡಿ ಕೋಟೆಯಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಘೋಷಣೆ – vishwanews24

Featured, ರಾಜ್ಯ ನ್ಯೂಸ್

ಅರ್ಜುನ ಪ್ರಾಣ ಕಳೆದುಕೊಂಡ ಜಾಗ, ಮೈಸೂರಿನ ಎಚ್‌ಡಿ ಕೋಟೆಯಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಘೋಷಣೆ

ಬೆಂಗಳೂರು : ನಾಡದೇವಿಯ ಹೊರುತ್ತಿದ್ದ ಕ್ಯಾಪ್ಟನ್ ಅರ್ಜುನ ಪ್ರಾಣಕಳೆದುಕೊಂಡ ಜಾಗದಲ್ಲಿ ಹಾಗೂ ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕ್ಯಾಪ್ಟನ್ ಅರ್ಜುನನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅರ್ಜುನನ ಸಾವಿನ ಕುರಿತಾದ ಸಂಪೂರ್ಣ ಮಾಹಿತಿ ಕೇಳಿದ್ದೇನೆ. ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಅಚಾನಕ್ ಆಗಿ ಸಾವನ್ನಪ್ಪಿದ್ದಾನೆ. ಆತ ಇನ್ನೂ ಹೆಚ್ಚು ಸಮಯ ಬದುಕಬೇಕಿತ್ತು. ಮತ್ತೊಂದು ಆನೆಯ ಕಾರ್ಯಾಚರಣೆಗೆಂದು ಅರ್ಜುನನನ್ನು ಉಪಯೋಗಿಸಿದ್ದರಿಂದ ಅರ್ಜುನ ಸಾವನ್ನಪ್ಪಿದ್ದಾನೆ ಎಂದರು.

ನಾಳೆಯಿಂದ ಕಟೀಲು ಯಕ್ಷಗಾನ ಮಂಡಳಿ ಆರೂ ಮೇಳಗಳ ತಿರುಗಾಟ ಆರಂಭ – vishwanews24

 

Leave a Reply